ತಿರುವನಂತಪುರಂ: ಮಾತಾ ಅಮೃತಾನಂದಮಯಿ (Mata Amritanandamayi) ಅವರ ತಾಯಿ ದಮಯಂತಿ (97) (Damayanthi Amma) ಅವರು ನಿಧನರಾಗಿದ್ದಾರೆ.
ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ಕೊಲ್ಲಂನ (Kollam) ಅಮೃತಪುರಿ ಆಶ್ರಮದಲ್ಲಿ (Amritapuri Ashram) ದಮಯಂತಿ ಅವರು ಕೊನೆಯುಸಿರೆಳೆದಿದ್ದು, ಮಂಗಳವಾರ ಸಂಜೆ 4 ಗಂಟೆಗೆ ಅಮೃತಪುರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಮರುಮದುವೆಯಾದ್ರು 9 ಮಕ್ಕಳ ತಂದೆ-ತಾಯಿಯಾಗಿರುವ ಮುಸ್ಲಿಂ ದಂಪತಿ
Advertisement
ದಮಯಂತಿ ಅವರು ಕೊಲ್ಲಂನ ಅಮೃತಪುರಿ ಎಡಮ್ಮನ್ನೆಲ್‍ನ ದಿವಂಗತ ಸುಗುಣಂದನ್ (Sugunandan) ಅವರ ಪತ್ನಿಯಾಗಿದ್ದು, ಇದೀಗ ಕಸ್ತೂರಿ ಭಾಯಿ, ಸುಭಗನ್, ಸುಗುಣಮ್ಮ, ಸಜಿನಿ, ಸುರೇಶ್ ಕುಮಾರ್, ಸತೀಶ್ ಕುಮಾರ್ ಮತ್ತು ಸುಧೀರ್ ಕುಮಾರ್ ಅವರ ಇತರ ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆ ಎದುರಿಸಿದ್ದ ಡಿ.ಕೆ ಶಿವಕುಮಾರ್‌ಗೆ ಅನಾರೋಗ್ಯ
Advertisement
Advertisement
ದಮಯಂತಿ ಅವರ ನಿಧನಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾತಾ ಅಮೃತಾನಂದಮಯಿ ದೇವಿಯ ಪ್ರೀತಿಯ ತಾಯಿ ದಮಯಂತಿ ಅಮ್ಮನವರ ನಿಧನದ ಸುದ್ದಿಯಿಂದ ದುಃಖವಾಗಿದೆ. ಅವರ ಅಗಲಿಕೆ ನನ್ನ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.