ಬೆಂಗಳೂರು: ನಗರದ ಕಂಠೀರವ ಸ್ಟೇಡಿಯಂನಲ್ಲಿ ಮಹಿಳಾ ಏಷ್ಯಾ ಕಪ್ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಲಾಂಛನಕ್ಕೆ ಅವಮಾನವಾಗಿದ್ದ ಘಟನೆ ನಡೆದಿತ್ತು.
ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಸಾಕಷ್ಟು ಜನರು ಕ್ರೀಡಾ ಇಲಾಖೆಯ ವಿರುದ್ಧ ತಿರುಗಿಬಿದ್ದಿದ್ರು. ಕೊನೆಗೂ ಎಚ್ಚೆತ್ತ ಕ್ರೀಡಾ ಇಲಾಖೆ ಬಾಸ್ಕೆಟ್ ಬಾಲ್ ಅಂಗಳದಲ್ಲಿದ್ದ ಅಶೋಕಸ್ತಂಭದ ಮ್ಯಾಟ್ ತೆಗೆದಿದ್ದಾರೆ.
Advertisement
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ 2017ರ ಫೀಭಾ ವುಮನ್ಸ್ ಏಷ್ಯಾಕಪ್ ಟೂರ್ನಿಮೆಂಟ್ ನಡೆಯುತ್ತಿದೆ. ಅಂತಾರಾಷ್ಟ್ರೀಯ ಟೂರ್ನಿಮೆಂಟಲ್ಲಿ 16 ದೇಶದ ಕ್ರೀಡಾಪಟುಗಳು ಭಾಗಿಯಾಗಿದ್ದು, ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿವೆ. ಈ ಬ್ಯಾಸ್ಕೆಟ್ ಬಾಲ್ ಟೊರ್ನಿಮೆಂಟ್ ನಲ್ಲಿ ರಾಷ್ಟ್ರ ಲಾಂಛನವನ್ನು ಹಾಕಿ ಅವಮಾನ ಮಾಡಲಾಗಿತ್ತು. ಸದ್ಯ ಈ ಮ್ಯಾಟ್ ಬದಲಾವಣೆ ಮಾಡಲಾಗಿದೆ.