ರಾಮನಗರ: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ ಪ್ರಕರಣ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಕೋರ್ಟ್ಗೆ ಹಾಜರಾಗಿದ್ದಾರೆ.
ರಾಮನಗರ ಸೆಷನ್ 3ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಮೇ 30ರಂದು ವಾರೆಂಟ್ ನೀಡಲಾಗಿತ್ತು. ವಾರೆಂಟ್ ನೀಡಲು ತೆರಳಿದ್ದಾಗ ಸುಂದರ್ ಪಿ ಗೌಡ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು.
Advertisement
ಇಂದು ರಾಮನಗರ ಕೋರ್ಟ್ ಗೆ ಹಾಜರಾಗಿದ್ದು, ಸುಂದರ್ ಪಿ ಗೌಡ ಜೊತೆಗೆ ನಿರ್ದೇಶಕ ನಾಗಶೇಖರ್ ಸಾಹಸ ನಿರ್ದೇಶಕ ರವಿವರ್ಮ ಕೋರ್ಟ್ ಗೆ ಹಾಜರಾಗಿದ್ದಾರೆ. ಇಂದು ನ್ಯಾಯಾಧೀಶ ಗೋಪಾಲ್ ರೈ ಮುಂದೆ ಹಾಜರಾಗಿದ್ದು, ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.
Advertisement
Advertisement
ನಡೆದಿದ್ದೇನು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗದಿದ್ದ ನಿರ್ಮಾಪಕ ಸುಂದರ್ ಪಿ ಗೌಡಗೆ ರಾಮನಗರ ಜೆಎಂಎಫ್ ಸಿ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿತ್ತು. ಜಾಮೀನು ರಹಿತ ವಾರೆಂಟ್ ಹಿನ್ನೆಲೆಯಲ್ಲಿ ಸುಂದರ್ ಪಿ ಗೌಡನನ್ನ ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಹೈಡ್ರಾಮವೇ ನಡೆದಿದ್ದು, ಮಂಗಳವಾರ ಸಂಜೆ ವೇಳೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ಬೆಂಗಳೂರಿನ ಸುಂದರ್ ಮನೆಗೆ ತೆರಳಿದ್ದರು.
Advertisement
ಈ ವೇಳೆ ಮನೆಯಲ್ಲಿ ಸುಂದರ್ ಹಾಗೂ ನಟ ದುನಿಯ ವಿಜಯ್ ಚರ್ಚೆಯಲ್ಲಿ ತೊಡಗಿದ್ದರು. ವಾರೆಂಟ್ ವಿಚಾರ ತಿಳಿಸಿದ ಪೊಲೀಸರು ಸುಂದರ್ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಬಟ್ಟೆ ಧರಿಸಿ ಬರುವುದಾಗಿ ಹೇಳಿ ಹೋಗಿದ್ದ ಸುಂದರಗೌಡ ಪರಾರಿಯಾಗಿದ್ದರು. ಆರೋಪಿಯ ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು.