ಪಾಟ್ನಾ: ಬಿಹಾರದ (Bihar) ಸರನ್ (Saran) ಜಿಲ್ಲೆಯಲ್ಲಿ 73 ಜನರ ಸಾವಿಗೆ ಕಾರಣವಾದ ಕಳ್ಳಭಟ್ಟಿ ದುರಂತ (Bihar Hooch Tragedy) ಪ್ರಕರಣದ ಮಾಸ್ಟರ್ ಮೈಂಡ್ (Mastermind) ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ದೆಹಲಿ ಪೊಲೀಸರ (Delhi Police) ತಂಡ ಕೊನೆಗೂ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಸರನ್ ಜಿಲ್ಲೆಯ ದೋಯಿಲಾ ಗ್ರಾಮದ ನಿವಾಸಿ ರಾಮ್ ಬಾಬು ಮಹತೋ ಎಂದು ಗುರುತಿಸಲಾಗಿದೆ. ಆತ ದೆಹಲಿಯಲ್ಲಿ ಅಡಗಿರುವ ಶಂಕೆಯ ಮೇರೆಗೆ ಅಪರಾಧ ವಿಭಾಗ ಅಂತರ್ ರಾಜ್ಯ ಸೆಲ್‌ಗೆ ಮಾಹಿತಿ ನೀಡಿತ್ತು ಎಂದು ವಿಶೇಷ ಪೊಲೀಸ್ ಕಮಿಷನರ್ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.
ತಾಂತ್ರಿಕ ಕಣ್ಗಾವಲು ಮತ್ತು ನಿರ್ದಿಷ್ಟ ಒಳಹರಿವಿನ ಆಧಾರದ ಮೇಲೆ ಬಿಹಾರ ಕಳ್ಳಭಟ್ಟಿ ದುರಂತ ಪ್ರಕರಣದ ಮಾಸ್ಟರ್ ಮೈಂಡ್‌ನನ್ನು ದ್ವಾರಕಾದಲ್ಲಿ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿಯ ಬಂಧನದ ಬಗ್ಗೆ ಮುಂದಿನ ಕ್ರಮಕ್ಕಾಗಿ ಬಿಹಾರ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!
ಬಿಹಾರದಲ್ಲಿ ಮದ್ಯ ನಿಷೇಧವಿರುವ ಕಾರಣ ಆರೋಪಿಗಳು ಬೇಗನೆ ಹಾಗೂ ಸುಲಭವಾಗಿ ಹಣ ಗಳಿಸುವ ಆಸೆಯಿಂದ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕಗೆ ಹೋಗಬೇಕಿದ್ದ ಕೊರಿಯರ್‌ನಲ್ಲಿತ್ತು 4 ಮಾನವನ ತಲೆಬುರುಡೆ