ಬೆಂಗಳೂರು: ಹಿಂದಿಯಲ್ಲಿ ಕಂಗನಾ ರಣಾವತ್ ನಟಿಸಿ ಸೂಪರ್ ಹಿಟ್ ಆಗಿದ್ದ ಕ್ವೀನ್ ಚಿತ್ರ ಕನ್ನಡದಲ್ಲಿ ‘ಬಟರ್ ಫ್ಲೈ’ ಆಗಿ ಅವತಾರವೆತ್ತುತ್ತಿದೆ. ಯಾವ ಕಥೆಯನ್ನಾದರೂ ಇಲ್ಲಿನ ನೇಟಿವಿಟಿಗೆ ತಕ್ಕುದಾಗಿ ಒಗ್ಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರೋ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಈ ಚಿತ್ರ ರೆಡಿಯಾಗುತ್ತಿದೆ.
ಚಿತ್ರೀಕರಣವನ್ನು ಅಂದುಕೊಂಡಂತೆಯೇ ಸುಸೂತ್ರವಾಗಿ ನಡೆಸುತ್ತಿದ್ದರೂ ರಮೇಶ್ ಅವರವಿಂದ್ ಅವರನ್ನು ಭಾರೀ ಚಿಂತೆಗೀಡು ಮಾಡಿದ್ದದ್ದು ವಿಶೇಷವಾದ ಒಂದು ಹಾಡು. ಮೂಲ ಚಿತ್ರ ಕ್ವೀನ್‍ನಲ್ಲಿ ಹಿಂದಿಯ ಹಳೆಯ ಹಾಡೊಂದನ್ನು ವಿಶೇಷವಾಗಿ ಬಳಸಿಕೊಳ್ಳಲಾಗಿತ್ತು. ಆ ಹಾಡು ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿಯೂ ಕೂಡಾ ಈ ಹಾಡನ್ನು ಅದೇ ರೀತಿ ರೂಪಿಸೋ ಕನಸು ಹೊಂದಿದ್ದ ರಮೇಶ್ ಅವರನ್ನು ಬಹು ದಿನದಿಂದಲೂ ಯಾವ ಗೀತೆಯನ್ನು ಆಯ್ಕೆ ಮಾಡಿಕೊಳ್ಳೋದೆಂಬ ಗೊಂದಲ ಕಾಡುತ್ತಿತ್ತಂತೆ. ಕಡೆಗೂ ಅವರು ಇದಕ್ಕಾಗಿ ಪ್ರಸಿದ್ಧ ರಂಗಗೀತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Advertisement
Truly a pleasure directing an army of phenomenal talents in #ParisParis#MovieButterfly pic.twitter.com/lx7RMWPlCk
— Ramesh Aravind (@Ramesh_aravind) April 16, 2018
Advertisement
ಅದು ದೇವದಾಸಿ ನಾಟಕಕ್ಕಾಗಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ಪ್ರಸಿದ್ಧ ರಂಗಗೀತೆ. ಸುಖವೀವ ಸುರಪಾನವಿದೇ ಸ್ವರ್ಗಸಮಾನನಂ ಎಂಬ ರಂಗಗೀತೆಯನ್ನು ರಮೇಶ್ ಅರವಿಂದ್ ಈ ಚಿತ್ರಕ್ಕೆ ಹೊಸಾ ಥರದಲ್ಲಿ ಬಳಸಿಕೊಂಡಿದ್ದಾರೆ. ಇದಕ್ಕೆ ಕೇವಲ ಅರ್ಧ ದಿನದಲ್ಲಿಯೇ ಕೊರಿಯೋಗ್ರಫಿ ಮಾಡಿರೋ ಗಣೇಶ್ ಆಚಾರ್ಯ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಈ ವಿಶೇಷವಾದ ಹಾಡಿಗೆ ಕುಣಿದಿರುವ ಪಾರುಲ್ ಕೂಡಾ ಇದನ್ನೊಂದು ಗ್ರೇಟ್ ಎಕ್ಸ್ ಪೀರಿಯನ್ಸ್ ಅಂತ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
Advertisement
ಸದಾ ಹೊಸತೇನನ್ನೋ ಸೃಷ್ಟಿಸಲು ಹಂಬಲಿಸುವ ರಮೇಶ್ ಅರವಿಂದ್ ಅವರು ತಮ್ಮ ಚಿತ್ರಕ್ಕೆ ರಂಗಗೀತೆಯೊಂದನ್ನು ಆರಿಸಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ.
Advertisement