ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ನಲ್ಲಿ ಬಾಲನಟನಾಗಿ ಅಭಿನಯಿಸಿರುವ ಮಾಸ್ಟರ್ ಅನ್ಮೋಲ್ ಚಿತ್ರದ ಕುರಿತು ಪಬ್ಲಿಕ್ ಟಿವಿ ಜೊತೆ ಚಿತ್ರದ ಅನುಭವ ಹಂಚಿಕೊಂಡಿದ್ದಾನೆ.
ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅನ್ಮೋಲ್ ಯಶ್ ಬಾಲ್ಯದ ಪಾತ್ರಧಾರಿಯಾಗಿ ಅಭಿನಯಿಸಿದ್ದಾನೆ. ಮಾಸ್ಟರ್ ಅನ್ಮೋಲ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆಜಿಎಫ್ ಚಿತ್ರಕ್ಕೆ ಅವಕಾಶ ಹೇಗೆ ದೊರೆಯಿತು, ಚಿತ್ರದಲ್ಲಿ ನಟಿಸಿದ ಅನಿಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾನೆ.
Advertisement
Advertisement
ಹಲವು ವರ್ಷಗಳಿಂದ ಡ್ಯಾನ್ಸ್, ಜಿಮ್ನಾಸ್ಟಿಕ್, ಕರಾಟೆ ಹೀಗೆ ಎಲ್ಲತರಹದ ಕಲೆಯನ್ನು ನನ್ನ ಗುರುಗಳಾದ ಚಾಮರಾಜ್ ಸಾರ್ ಬಳಿ ಕಲಿಯುತ್ತಿದ್ದೇನೆ. ಕೆಜಿಎಫ್ ಚಿತ್ರದಲ್ಲಿ ಬಾಲನಟನಾಗಿ ನಟಿಸಲು ಅವರೇ ನಿರ್ದೇಶಕ ಪ್ರಶಾಂತ್ ನೀಲ್ ಬಳಿ ಮಾತನಾಡಿ ಅವಕಾಶ ಕೊಡಿಸಿದ್ದರು ಎಂದು ತಿಳಿಸಿದನು.
Advertisement
Advertisement
ಮೊದಲು ಕೆಜಿಎಫ್ ಚಿತ್ರಕ್ಕೆ ಯಶ್ ಅವರು ನಾಯಕ ನಟ ಅಂತ ಗೊತ್ತಿರಲಿಲ್ಲ. ಬಳಿಕ ನಿರ್ದೇಶಕರು ಹೇಳಿದ ಮೇಲೆ ತಿಳಿಯಿತು. ಚಿತ್ರದಲ್ಲಿ ನಟಿಸುವಾಗ ನನ್ನ ಪೋಷಕರು, ಗುರುಗಳು ಹಾಗೂ ಕೆಜಿಎಫ್ ಚಿತ್ರ ತಂಡದವರು ತುಂಬಾ ಸರ್ಪೋಟ್ ಮಾಡಿದರು. ಇವತ್ತು ಬೆಳಗ್ಗೆ ಚಿತ್ರವನ್ನು ನಾನು ಚಿತ್ರಮಂದಿರಕ್ಕೆ ಹೋಗಿ ನೋಡಿದೆ. ಕೆಜಿಎಫ್ ಅಂತಹ ದೊಡ್ಡ ಚಿತ್ರದಲ್ಲಿ ನಟಿಸಿದಕ್ಕೆ ತುಂಬಾ ಖುಷಿಯಾಗ್ತಿದೆ. ಸುಮಾರು ಒಂದು ತಿಂಗಳು ಶೂಟಿಂಗ್ ಇತ್ತು, ಅದರಲ್ಲೂ ಮುಂಬೈನಲ್ಲಿ ಶೂಟಿಂಗ್ ನನಗೆ ತುಂಬಾ ಇಷ್ಟ. ಈ ಚಿತ್ರದಿಂದ ಬಹಳಷ್ಟು ಕಲಿತ್ತಿದ್ದೇನೆ. ಶೂಟಿಂಗ್ ಸಮಯದಲ್ಲಿ ತುಂಬಾ ಎಂಜಾಯ್ ಮಾಡಿದ್ದೀನಿ. ಚಿತ್ರವು ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಅನ್ಮೋಲ್ ಅನುಭವ ಹಂಚಿಕೊಂಡನು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv