ಆನೇಕಲ್: ಇಲ್ಲಿನ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ (Bengaluru Hosur Highway) ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಹೈರಾಣಾಗಿರುವ ಘಟನೆ ನಡೆದಿದೆ.
ಚಂದಾಪುರದಿಂದ ಅತ್ತಿಬೆಲೆಯವರೆಗೂ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು, ವಾಹನ ಸವಾರರು ಕಿಲೋಮೀಟರ್ ಗಟ್ಟಲೇ ದಟ್ಟಣೆಯಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಲಾಜಿಸ್ಟಿಕ್ ಕೇಂದ್ರ, ಪೈಲಟ್ ತರಬೇತಿ ಸಂಸ್ಥೆ ಸ್ಥಾಪನೆ – ಬೋಯಿಂಗ್ ಕಂಪನಿಗೆ ಎಂ.ಬಿ.ಪಾಟೀಲ್ ಆಹ್ವಾನ
ಮಧ್ಯಾಹ್ನ ಮೂರು ಗಂಟೆಯಿಂದಲೇ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದು, ವಾಹನಗಳು ನಿಂತಲ್ಲೇ ನಿಂತಿವೆ. ಆದರೂ ಪೊಲೀಸರು (Traffic Police) ತಲೆ ಕೆಡಿಸಿಕೊಳ್ಳದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದನ್ನೂ ಓದಿ: ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ
ಎಲೆಕ್ಟ್ರಾನ್ ಸಿಟಿಯಿಂದ ಹಳೆ ಚಂದಾಪುರದ ತನಕವೂ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಅತ್ತಿಬೆಲೆ, ಸೂರ್ಯ ನಗರ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಘಟನೆ ನಡೆದಿದ್ದು, ಮೂರು ಠಾಣಾ ವ್ಯಾಪ್ತಿಯ ಪೊಲೀಸರಿಗೂ ತಲೆನೋವು ತಂದಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]