ಆಸ್ತಿ ವಿಚಾರಕ್ಕೆ ನಡು ಬೀದಿಯಲ್ಲಿ ಸಂಬಂಧಿಕರ ಮಾರಾಮಾರಿ

Public TV
1 Min Read
New Delhi

ನವದೆಹಲಿ: ಆಸ್ತಿ ವಿಚಾರಕ್ಕೆ ಸಂಬಂಧಿಕರು ನಡು ಬೀದಿಯಲ್ಲಿ ಮಾರಾಮಾರಿ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಆರೋಪಿಗಳನ್ನು ಗುರುತಿಸಿ, ಅವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

crime

ನಡು ಬೀದಿಯಲ್ಲಿ ಹಗಲು ಹೊತ್ತಿನಲ್ಲಿಯೇ ದೆಹಲಿಯ ಉಸ್ಮಾನ್‍ಪುರ ಪ್ರದೇಶದಲ್ಲಿ ಜಗಳ ಆಡುತ್ತಿದ್ದವರನ್ನು ಪೊಲೀಸರು ಬಿಡಿಸಿ ಇದೀಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಜ್ಞಾನದೀವಿಗೆ 2ನೇ ಆವೃತ್ತಿಗೆ ಬೊಮ್ಮಾಯಿ, ಸಿದ್ದರಾಮಯ್ಯ ಚಾಲನೆ

ವೀಡಿಯೋದಲ್ಲಿ ನೆಲದ ಮೇಲೆ ಇರುವ ವ್ಯಕ್ತಿಯನ್ನು ತುಂಡಾಗಿರುವ ಮರದ ಕೋಲಿನಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ವಯಸ್ಸಾದ ಮಹಿಳೆಯೊಬ್ಬಳು ವ್ಯಕ್ತಿಯನ್ನು ಹೊಡೆಯದಂತೆ ಮನವಿ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ವ್ಯಕ್ತಿ ಗಾಯಗೊಂಡಿದ್ದರೂ, ಎರಡು ಕಡೆಯ ಸಂಬಂಧಿಕರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರೆ, ಜನ ಬಾಲ್ಕನಿಯಿಂದ ನೋಡುತ್ತಿರುತ್ತಾರೆ. ಈ ಜಗಳ ಶ್ಯಾಮವೀರ್ ಮತ್ತು ಜಗತ್ ಅವರ ಮಕ್ಕಳ ನಡುವೆ ನಡೆದಿದೆ ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ವಧು-ಕಣ್ಣು, ಹೃದಯ, ಕಿಡ್ನಿ ದಾನ

ಆಸ್ತಿ ವಿವಾದಕ್ಕೆ ಎರಡು ಮನೆಯವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿಂದೆ ಇಬ್ಬರು ಪರಸ್ಪರ ಆಸ್ತಿಗಾಗಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇಂದು ಜಗತ್ ಮತ್ತು ಇತರರು ಶ್ಯಾಮವೀರ್ ಮತ್ತು ಆತನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಹೇಳಿಕೆ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *