ಬೆಂಗಳೂರು: ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆಗೆ ತೆರಳಿದ್ದ ಕನ್ನಡಿಗರು ಪರದಾಡುತ್ತಿದ್ದಾರೆ.
ಮೈಸೂರು, ಮಂಡ್ಯ, ರಾಮನಗರ ಭಾಗದ ಯಾತ್ರಾರ್ಥಿಗಳು ನೇಪಾಳದ ಸಿನಿಕೋಟ್ ಮೂಲಕ ಅಮರನಾಥ್ ಯಾತ್ರೆಗೆ ತೆರಳಬೇಕಿತ್ತು. ಆದ್ರೆ ಮಳೆಯಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, 300ಕ್ಕೂ ಹೆಚ್ಚು ಕನ್ನಡಿಗರು ಸಿಕೋಟ್‍ನಲ್ಲೇ ಸಿಲುಕುಕೊಂಡಿದ್ದಾರೆ.
ಏಜೆನ್ಸಿಯವರು ಇವರನ್ನು ಬಿಟ್ಟು ಪರಾರಿಯಾಗಿದ್ದು, ರಾಜ್ಯಕ್ಕೆ ವಾಪಸ್ ಬರಲೂ ಆಗದೇ, ಊಟ, ತಿಂಡಿಯೂ ಇಲ್ಲದೇ ಒದ್ದಾಡ್ತಿದ್ದಾರೆ. ಈ ಮಧ್ಯೆ, ವಾರಾಂತ್ಯಕ್ಕೆ ಇಡೀ ದೇಶಾದ್ಯಂತ ಭರ್ಜರಿ ವರ್ಷಧಾರೆ ಆಗುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.