ಬೀದರ್: ಜೀವಂತ ಕುರಿ ನುಂಗಿ ಬಿಲಾ ಸೇರಿದ್ದ ಹೆಬ್ಬಾವನ್ನು (Python) ಹೊರ ತೆಗೆದು ಗ್ರಾಮಸ್ಥರು ಹೆಗಲ ಮೇಲೆ ಹೊತ್ತೊಯ್ದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘಾಟ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.
Advertisement
ಘಾಟ್ ಹಿಪ್ಪರಗಾ ಗ್ರಾಮದ ವ್ಯಾಪ್ತಿಯಲ್ಲಿನ ಜಮೀನಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತಕ್ಷವಾಗಿದ್ದು, ಗ್ರಾಮದ ರಾಜಕುಮಾರ್ ರೊಡ್ಡೆ ಎಂಬವರಿಗೆ ಸೇರಿದ ಕುರಿಯನ್ನು ನುಂಗಿ ಹೆಬ್ಬಾವು ಒಂದು ಬಿಲಾ ಸೇರಿತ್ತು. ಬಾರಿ ಗಾತ್ರದ ಹೆಬ್ಬಾವು ನೋಡಿ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಈ ಸುದ್ದಿ ತಿಳಿದು ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿತು. ಇದನ್ನೂ ಓದಿ: ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್
Advertisement
Advertisement
ಉರಗ ತಜ್ಞ ಅಶೋಕ್ ಶೆಟ್ಟಿ ಅವರ ಸಹಾಯದೊಂದಿಗೆ ಸುಮಾರು 12 ಅಡಿಗೂ ಅಧಿಕ ಉದ್ದವಿರುವ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶಕ್ಕೆ ಹೆಬ್ಬಾವನ್ನು ಹೋಗಿ ಬಿಟ್ಟು ಬಂದಿದ್ದಾರೆ. ಇದನ್ನೂ ಓದಿ: ಕೆಸಿಆರ್, ಕವಿತಾರ ಬಗ್ಗೆ ಮಾತಾಡಿದ್ರೆ ನಾಲಿಗೆ ಕತ್ತರಿಸುತ್ತೇನೆ – ಅರವಿಂದ್ ವಿರುದ್ಧ ಎಂಎಲ್‍ಸಿ ಶಂಬಿಪುರ ಕಿಡಿ