– ಸಿದ್ದಗಂಗಾ ಶ್ರೀಗಳಿಂದ ಚಾಲನೆ
– ದಾಬಸ್ ಪೇಟೆ ತಲುಪಿದ ಮೊದಲ ದಿನ ಕಾಲ್ನಡಿಗೆ ಹೋರಾಟ
ತುಮಕೂರು: ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕರು (Teachers) ಹಾಗೂ ನೌಕರರಿಗೆ (Employees) ನಿಶ್ಚಿತ ಪಿಂಚಣಿ (Fixed Pension) ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ತುಮಕೂರು (Tumakuru) ಸಿದ್ದಗಂಗಾ ಮಠದಿಂದ (Siddaganga Mutt) ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೂ ನಡೆಸುತ್ತಿರುವ ಬೃಹತ್ ಪಾದಯಾತ್ರೆ, ಪ್ರತಿಭಟನೆಗೆ (Protest) ಶುಕ್ರವಾರ ಬೆಳಗ್ಗೆ ಸಿದ್ಧಗಂಗಾ ಮಠದ ಶ್ರೀಗಳಾದ ಸಿದ್ಧಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
Advertisement
Advertisement
ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಕಾಲ್ನಡಿಗೆ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಶ್ರೀಗಳು, ಈಗಾಗಲೇ ನಿವೃತ್ತರಾಗಿರುವ ಎಷ್ಟೋ ಶಿಕ್ಷಕರು ಪಡಬಾರದ ಕಷ್ಟಗಳನ್ನು ಪಡುತ್ತಿರುವುದು ಅಂತ್ಯಂತ ನೋವು ತಂದಿದೆ. ಆದ್ದರಿಂದ ಸರ್ಕಾರ ಕೂಡಲೇ ಅನುದಾನಿತ ನೌಕರರ ನ್ಯಾಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಮಹಿಳೆಗೆ ಮಾಸ್ಕ್ ತೊಡಿಸಿದ ರಾಗಾ
Advertisement
Advertisement
ಕಾಲ್ನಡಿಗೆ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5,000 ನೌಕರರು ಪಾಲ್ಗೊಂಡಿದ್ದು, ಪಾದಯಾತ್ರೆಯ ಮೊದಲ ದಿನ ದಾಬಸ್ ಪೇಟೆ ತಲುಪಿದೆ. ಶನಿವಾರ ಅರೆ ಬೆತ್ತಲೆಯಾಗಿ ಕಾಲ್ನಡಿಗೆ ಹೋರಾಟ ನಡೆಸುತ್ತೇವೆ ಎಂದು ಸಂಘದ ಅಧ್ಯಕ್ಷ ಜಿ ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತು ರಾಜ ಮತ್ತಿಕೊಪ್ಪ, ಸಂಘಟನಾ ಕಾರ್ಯದರ್ಶಿ ಹೊಸದುರ್ಗ ಪ್ರಕಾಶ್ ಎನ್‌ಒ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಆರ್‌ಬಿಐನಿಂದ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ