Bengaluru CityDistrictsKarnatakaLatestLeading NewsMain Post

ಐತಿಹಾಸಿಕ ಸಿಂಗಾಪುರ ಕೆರೆ ಮರುನಾಮಕರಣಕ್ಕೆ ಭಾರೀ ವಿರೋಧ

ಬೆಂಗಳೂರು: ಅದು ನೂರಾರು ವರ್ಷಗಳ ಸುದೀರ್ಘ ಅಸ್ತಿತ್ವ ಹೊಂದಿರುವ ಐತಿಹಾಸಿಕ ಪ್ರದೇಶ. ದಶಕಗಳ ಹಿಂದೆಯೇ ಇತಿಹಾಸಕಾರರು ಇದನ್ನು ಕೋಟೆಯ ಪಟ್ಟಣ ಎಂದು ಕರೆದಿದ್ದರು. ಇದೀಗ ಕೆರೆಗೆ ಇದ್ದ ಊರಿನ ಹೆಸರಿನ ಬದಲಾವಣೆ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.

16 ನೇ ಶತಮಾನದ ಆರಂಭದಿಂದಲೂ ಜನವಸತಿ ಪ್ರದೇಶವಾಗಿದೆ. ಈಗ ವಿಚಾರ ಏನಂದ್ರೆ, ಐತಿಹಾಸಿಕ ಸಿಂಗಾಪುರ ಕೆರೆ (Singapura Lake) ಯ ಹೆಸರನ್ನ ಬದಲಾವಣೆ ಮಾಡಿದ್ದರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು

ಸಿಂಗಾಪುರ ಕೆರೆಗೆ ಭಗವಾನ್ ಬುದ್ದ, ಅಂಬೇಡ್ಕರ್ ಕೆರೆ ಎಂದು ಮರುನಾಮಕರಣ ಮಾಡಿರೋದು ಈಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ನವೆಂಬರ್ 6ರಂದು ಸಿಎಂ ಬೊಮ್ಮಾಯಿ (Basavaraj Bommai) ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದಾರೆ. ಸಾರ್ವಜನಿಕರು ಇದರ ವಿರುದ್ಧ ತಿರುಗಿ ಬಿದ್ದಿದ್ದು, ಯಾವುದೇ ಕೆರೆಯನ್ನ ಬದಲಿಸುವ ಅಧಿಕಾರ ಬಿಬಿಎಂಪಿಗೆ ಇಲ್ಲ. ನಗರದ ಇತರೆ ಕೆರೆಗಳಿಗೆ ಊರಿನ ಹೆಸರನ್ನೇ ಇಡಲಾಗಿದೆ. ಸಿಂಗಾಪುರಕ್ಕೆ ಇರುವ ಐತಿಹಾಸಿಕ ಕೆರೆಯ ಪ್ರತಿಮೆಯನ್ನ ಹಾಳು ಮಾಡುವ ಕೆಲಸ ಆಗ್ತಿದೆ. ಕೂಡಲೇ ಇದನ್ನ ಹಿಂಪಡೆದು ಐತಿಹಾಸಿಕವಾಗಿದ್ದ ಸಿಂಗಾಪುರ ಕೆರೆ ಅಂತಲೇ ಮುಂದುವರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಎಲ್ಲಿಯೂ ಸಹ ಜೀವಂತ ಕೆರೆಗೆ ‘ಪಾರ್ಕ್’ (Park) ಅಂತ ಯಾರೂ ಕರೆದಿರಲಿಲ್ಲ. ಆದರೆ ಈಗ ನೂರಾರು ವರ್ಷಗಳ ಇತಿಹಾಸವಿರುವ ಕೆರೆಗೆ ಈ ರೀತಿ ಪಾರ್ಕ್ ಅಂತ ಹೆಸರು ಬದಲಿಸಿದ್ದಾರೆ. ರಾಜಕೀಯ ದುರುದ್ದೇಶಕ್ಕೆ ಹೀಗೆ ಮಾಡಲಾಗ್ತಿದೆ. ನಾವು ಅಂಬೇಡ್ಕರ್ ಹೆಸರಿಗೆ ವಿರೋಧ ಮಾಡ್ತಿಲ್ಲ, ಊರಿಗೆ ಹಿರಿಮೆಗಾಗಿ ಸಿಂಗಾಪುರ ಹೆಸರನ್ನೇ ಕೆರೆಗೆ ಮುಂದುವರಿಸಬೇಕು. ಇಲ್ಲವಾದರೆ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, 16ನೇ ಶತಮಾನದಿಂದಲೂ ಜನವಸತಿ ಪ್ರದೇಶವಾಗಿರುವ ಸಿಂಗಾಪುರ ಗ್ರಾಮದ ಇತಿಹಾಸ ಮರೆಮಾಚಲು ರಾಜಕೀಯ ಬಳಸಲಾಗ್ತಿದೆ. ಕೆರೆಯ ಹೆಸರನ್ನ ಬದಲಿಸಿದ್ದರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆಯನ್ನ ಸಿಂಗಾಪುರ ಗ್ರಾಮಸ್ಥರು ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button