ಬೆಂಗಳೂರು: ಚುನಾವಣೆ (Karnataka Election) ಹತ್ತಿರ ಬರುತ್ತಿದ್ದಂತೆ ಎಲ್ಲಾ ಸಮುದಾಯಗಳು ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿವೆ. ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆದು ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಬೇಕು ಎಂದು ಹಕ್ಕೊತ್ತಾಯ ಮಾಡಲು ಸಮಾವೇಶಗಳನ್ನು ನಡೆಸುತ್ತಿವೆ. ಇದೇ ಸಾಲಿಗೆ ಈಗ ಕ್ಷತ್ರಿಯ (Kshatriya) ಸಮುದಾಯ ಸಿದ್ಧತೆ ಮಾಡಿದ್ದು, ಜ. 29ರಂದು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಬಲ ಪ್ರದರ್ಶನಕ್ಕೆ ಮುಂದಾಗಿದೆ.
ಕ್ಷತ್ರಿಯ ಸಮುದಾಯದ ನಾಯಕರು ದುರ್ಬಲರಾಗಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದ ಕಾರಣ ಈ ರೀತಿಯ ಸಂಕಷ್ಟ ಎದುರಾಗಿದೆ. ಇನ್ನು ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ಸಮಾಜ ಗಟ್ಟಿ ಮಾಡುವ ಕೆಲಸ ಸಮಾವೇಶದ ಮೂಲಕ ಆಗಲಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷರಾದ ಉದಯ್ ಸಿಂಗ್ (Uday Singh) ತಿಳಿಸಿದ್ದಾರೆ.
Advertisement
ಕ್ಷತ್ರಿಯ ಸಮಾಜದಲ್ಲಿ ಒಟ್ಟು 38 ಒಳಪಂಗಡಗಳಿವೆ. 38 ಒಳಪಂಗಡಗಳನ್ನೂ ಒಟ್ಟಿಗೆ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದೇವೆ. ಚುನಾವಣೆಯ ಸಂದರ್ಭದಲ್ಲೇ ನಮ್ಮ ಬಲ ತಿಳಿಸಬೇಕು. ನಮ್ಮನ್ನು ರಾಜಕೀಯ ಪಕ್ಷಗಳು (Political Party) ನಮ್ಮ ಸಾಮರ್ಥ್ಯವನ್ನು ಪರಿಗಣಿಸುವುದಿಲ್ಲ. ರಾಜ್ಯಾದ್ಯಂತ ಕ್ಷತ್ರಿಯ ಸಮುದಾಯ ಒಂದೂ ಕಾಲು ಕೋಟಿ ಜನಸಂಖ್ಯೆಯಲ್ಲಿದ್ದಾರೆ. ರಾಜಕೀಯದಲ್ಲಿ ಸಂಖ್ಯೆ ಬಲದ ಆಧಾರದ ಮೇಲೆ ಮಣೆ ಹಾಕುವ ಕೆಲಸ ಆಗುತ್ತಿದೆ. 38 ಮೂಲ ಕ್ಷತ್ರಿಯರು ಸೇರಿ ಇದೀಗ ಒಗ್ಗಟ್ಟಾಗಿ ಹೋರಾಟ ಮಾಡಲು ಈ ಸಮಾವೇಶ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಒಂದೇ ದಿನ ಕರಗಿತು 46 ಸಾವಿರ ಕೋಟಿ – ಇದೊಂದು ಆಧಾರ ರಹಿತ ವರದಿ ಎಂದ ಅದಾನಿ ಗ್ರೂಪ್
Advertisement
Advertisement
ಬೇಡಿಕೆ ಏನು?
2018 ರಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸ್ಥಾಪನೆಯಾಗಿದೆ. ಅದರೆ ನಮ್ಮನ್ನು ಸರಿಯಾದ ರೀತಿಯಲ್ಲಿ ಪರಿಗಣಿಸಿಲ್ಲ. ನಮಗೆ ಪ್ರಾತಿನಿಧ್ಯ ನೀಡಬೇಕು. ಆರ್ಥಿಕ, ಶೈಕ್ಷಣಿಕವಾಗಿ, ರಾಜಕೀಯ ಪಾಲು ಪಡೆದುಕೊಳ್ಳಲು ಅವಕಾಶ ಮಾಡಕೊಡಿ. ನಮ್ಮ ಸಮುದಾಯದ ಯುವಕರಿಗೆ ಚುನಾವಣೆಯಲ್ಲಿ ಆದ್ಯತೆ ನೀಡಬೇಕು ಎಂದು ಕ್ಷತ್ರಿಯ ಸಮಾಜ ಬೇಡಿಕೆ ಇಟ್ಟಿದೆ.
Advertisement
ಎಲ್ಲಾ ಪಕ್ಷಗಳ ಕ್ಷತ್ರಿಯ ನಾಯಕರು ಸೇರಿದಂತೆ ಹಲವು ನಾಯಕರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ (HD Devegowda) , ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh), ಆನಂದ್ ಸಿಂಗ್, ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಮುಖಂಡರಿಗೆ ಅಹ್ವಾನ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ (Bengaluru City) ಶೇ. 25 ರಷ್ಟು ಕ್ಷತ್ರಿಯ ಸಮುದಾಯದವರಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಠ 20 ರಿಂದ 25 ಸಾವಿರ ಕ್ಷತ್ರಿಯ ಸಮುದಾಯದವರಿದ್ದಾರೆ. ಸುಮಾರು 150 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮವರಿದ್ದಾರೆ. ಆದ್ದರಿಂದ ಈ ಭಾರೀ ನಮಗೆ ಪಾತಿನಿಧ್ಯ ನೀಡಿ ಎನ್ನುವ ಸಂದೇಶವನ್ನು ಸಮಾವೇಶದ ಮೂಲಕ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಂದೇಶ ರವಾನಿಸಲು ಕ್ಷತ್ರಿಯ ಸಮುದಾಯ ಮುಂದಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k