ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

Public TV
2 Min Read
bse share market

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನ ಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಭಾರತದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ (BSE) ಸೂಚಂಕ್ಯ  ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.

ಸೆನ್ಸೆಕ್ಸ್‌ ಒಂದೇ ದಿನ 2000 ಅಂಕ ದಾಟಿದ್ದರೆ ನಿಫ್ಟಿ ಒಂದೇ ದಿನ 600 ಅಂಕ ಏರಿಕೆ ಕಂಡಿದೆ. ಗಿಫ್ಟಿ ನಿಫ್ಟಿ 800 ಅಂಕ ಏರಿದೆ.


ಸಂವೇದಿ ಸೂಚಕ್ಯ ಏರಿಕೆಯಾಗಿದ್ದರೆ ಹೂಡಿಕೆದಾರರಿಗೆ ಸಮಸ್ಯೆಯಾಗಿದೆ. ಹೆವಿ ಟ್ರಾಫಿಕ್‌ನಿಂದಾಗಿ ಬ್ರೋಕರೇಜ್‌ ಕಂಪನಿಗಳಾದ ಝೆರೋದಾ (Zerodha), ಗ್ರೋ (Groww) ಸೇರಿದಂತೆ ಹಲವರು ಕಂಪನಿಗಳ ಸರ್ವರ್‌ ಡೌನ್‌ (Server Down) ಆಗಿತ್ತು. CDSL ವೆಬ್‌ಸೈಟ್‌ ಡೌನ್‌ ಆಗಿದ್ದರಿಂದ ಹೂಡಿಕೆದಾರರಿಗೆ ಷೇರು ಮಾರಾಟ ಮಾಡಲು ಸಮಸ್ಯೆ ಆಗಿತ್ತು.ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

ಬಜೆಟ್‌ ಅಥವಾ ಬೇರೆ ಯಾವುದೇ ಮಹತ್ವದ ದಿನ ಬಂದಾಗ ಬ್ರೋಕರೇಜ್‌ ಕಂಪನಿಗಳ ಸರ್ವರ್‌ ಡೌನ್‌ ಆಗುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಕಂಪನಿಗಳು ಸರ್ವರ್‌ ಸಾಮರ್ಥ್ಯವನ್ನು ಹೆಚ್ಚಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Share This Article