-ಬೆಟ್ಟದ ಸುತ್ತಲೂ ಆವರಿಸಿದ ಬೆಂಕಿ
ಚಿಕ್ಕಬಳ್ಳಾಪುರ: ಐತಿಹಾಸಿಕ ಪ್ರಸಿದ್ಧ ತಾಣ ನಂದಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವ ವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿ ಬೆಂಕಿ ತನ್ನ ರೌದ್ರಾವತಾರ ತಾಳಿದೆ. ನಂದಿಬೆಟ್ಟದಲ್ಲೂ ಸಹ ಕಾಡ್ಗಿಚ್ಚು ಹೊತ್ತಿಕೊಂಡು ಆತಂಕ ಸೃಷ್ಟಿ ಮಾಡಿದೆ. ನಂದಿಗಿರಿಧಾಮದ ತಪ್ಪಲಿನ ಸುಲ್ತಾನಪೇಟೆಯ ಮಾರ್ಗದ ಕಡೆಯಿಂದ ಟಿಪ್ಪು ಬೇಸಿಗೆ ಆರಮನೆಯ ಹಿಂಭಾಗದವರೆಗೂ ಬೆಂಕಿ ಹೊತ್ತಿಕೊಂಡಿದ್ದು, ಬೆಟ್ಟದ ಮೇಲಿನ ಕೋಟೆಯ ಕಾಲ್ನಡಿಗೆ ಮಾರ್ಗದ ಸುತ್ತ ಮುತ್ತಲೂ ಸಂಪೂರ್ಣ ಬೆಂಕಿ ಆವರಿಸಿದೆ. ನೋಡ ನೋಡುತ್ತಲೇ ಬಿಸಲಿನ ತಾಪಕ್ಕೆ ಬಳಲಿ ಬೆಂಡಾಗಿ ಉದುರಿದ್ದ ತರಗಲೆಗೆಳ ಮುಖಾಂತರ ಬೆಂಕಿ ಮತ್ತಷ್ಟು ಹಬ್ಬಿದ್ದು ಇಡೀ ಬೆಟ್ಟದ ಸುತ್ತಲೂ ಆವರಿಸಿ ಆತಂಕ ಮನೆ ಮಾಡಿದೆ.
Advertisement
Advertisement
ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ನಂಧಿಗಿರಿಧಾಮದ ಸಿಬ್ಬಂದಿ ಸಾಕಷ್ಟು ಹರಸಾಹಸ ಪಟ್ಟು ಬೆಂಕಿ ನಂದಿಸಲು ಪ್ರಯತ್ನಿಸಲು ಯತ್ನಿಸಿದರಾದ್ರೂ ಸಿಬ್ಬಂದಿಯ ಪ್ರಯತ್ನ ಫಲಪ್ರದವಾಗಿಲ್ಲ. ಕಾರಣ ಬೆಟ್ಟದಲ್ಲಿ ಬೆಂಕಿ ಹಬ್ಬಿರೋ ಕಾರಣ ಬೆಟ್ಟದ ಸುತ್ತ ಮುತ್ತಲೂ ಹೊತ್ತಿಕೊಂಡಿರೋ ಜಾಗಕ್ಕೆ ಆಗ್ನಿಶಾಮಕ ವಾಹನವಾಗಲೀ, ಯಾರೂ ಸಹ ಹೋಗಲಾಗುವುದಿಲ್ಲ. ಕೊನೆಗೆ ಬೆಟ್ಟದ ಸುತ್ತ ಹೊತ್ತಿಕೊಂಡ ಬೆಂಕಿ ಬೆಟ್ಟದ ಮೇಲೆ ತಾಗದಂತೆ ಗಂಟೆಗಟ್ಟಲೇ ಹರಸಾಹಸ ಪಟ್ಟು ಸಿಬ್ಬಂದಿ ಬೆಂಕಿ ನಂದಿಸಿಕೊಂಡಿದ್ದಾರೆ.
Advertisement
ನಂದಿಬೆಟ್ಟ ಸಾಕಷ್ಟು ಎತ್ತರ ಹಾಗೂ ವಿಶಾಲವಾಗಿದ್ದು, ನಂದಿಬೆಟ್ಟದ ತಪ್ಪಲಿನ ಜಾಗ ಯಾರೂ ಹೋಗಲಾಗದಷ್ಟು ಕಲ್ಲು ಮುಳ್ಳುಗಳ ದುರ್ಗುಮ ಹಾದಿ. ಹೀಗಾಗಿ ಬೆಂಕಿ ಬಿದ್ದ ಜಾಗಕ್ಕೆ ಹೋಗಿ ಬೆಂಕಿ ನಂದಿಸೋದು ಅಸಾಧ್ಯವಾದ ಕೆಲಸ. ಇದರಿಂದ ನಂದಿಬೆಟ್ಟದಲ್ಲಿ ಬೆಂಕಿ ಹೊತ್ತಿಕೊಂಡರೂ ತಾನಾಗೇ ನಂದಿ ಹೋಗಬೇಕೆ ಹೊರತು ಬಲವಂತವಾಗಿ ನಂದಿಸಲಾಗವುದಿಲ್ಲ. ಹೀಗಾಗಿ ಪ್ರತಿ ವರ್ಷವೂ ಬೇಸಿಗೆಯಲ್ಲಿ ಇಂತಹ ಅವಘಡಗಳು ಮರುಕಳಿಸುತ್ತಲೇ ಇರುತ್ತವೆ.
Advertisement
ಇತ್ತ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದ ಹೊರ ವಲಯದಲ್ಲಿ ಕಳೆದ ನಾಲ್ಕು ದಿನಗಳಿಂದ ಬೆಂಕಿ ಕಾಣಿಸಿಕೊಂಡಿದ್ದು, ಇಂದು ಕೂಡ ಕಾಡ್ಗಿಚ್ಚು ಮುಂದುವರಿದಿದೆ. ಬೆಂಕಿಯಿಂದ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಕೂಡ ಭಸ್ಮವಾಗಿದ್ದು, ಬಂಡಿಪುರದ ಗೋಪಾಲಸ್ವಾಮಿ ಬೀಟ್‍ನಲ್ಲಿ ಇನ್ನೂ ಬೆಂಕಿ ಆರಿಲ್ಲ. ಕಾಡಿನ ಬೆಟ್ಟಕ್ಕೆ ಬೆಂಕಿ ಬಿದ್ದ ಕಾರಣ ಬೆಂಕಿಯನ್ನು ಆರಿಸಲಾಗದೇ ಧಗ ಧಗ ಉರಿಯುತ್ತಿದೆ. ಹೀಗಾಗಿ ಊಟಿ-ಗುಂಡ್ಲುಪೇಟೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ.
ಬೆಂಗಳೂರಿನ ಯಲಹಂಕ ವಾಯುನೆಲೆಯ ಪಾರ್ಕಿಂಗ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದು 300ಕ್ಕೂ ಹೆಚ್ಚು ಕಾರುಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ವೀಕೆಂಡ್ ಅಂತಾ ಲೋಹದ ಹಕ್ಕಿಗಳ ಹಾರಾಟ ನೋಡಲು ಬಂದವರ ಕಾರುಗಳು ಕಣ್ಣ ಮುಂದೆಯೇ ಬೆಂಕಿಗಾಹುತಿ ಆಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv