ನವದೆಹಲಿ: ಬುಧವಾರ ಮತ್ತೆ ಉತ್ತರ ಭಾರತದಲ್ಲಿ ಮಂಜಿನ (Fog) ದಟ್ಟನೆ ಹಾಗೂ ತೀವ್ರ ಚಳಿ ಹೆಚ್ಚಾಗಿದ್ದು, ಈ ವೇಳೆ ದೆಹಲಿಯ (New Delhi) ಸುಮಾರು 100 ವಿಮಾನಗಳ ವೇಳೆಯನ್ನು ಹಾಗೂ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾತನಾಡಿ, 3 ದಿನಗಳಿಂದ ಉಂಟಾಗುತ್ತಿರುವ ಹವಮಾನ (Weather) ವೈಪರೀತ್ಯದಿಂದಾಗಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು (Flight) ವಿಳಂಬವಾಗಿ ಬಂದಿದೆ. ಕೆಲವು ವಿಮಾನಗಳ ಮಾರ್ಗವನ್ನು ಬದಲಾಗಿದೆ ಎಂದು ತಿಳಿಸಿದರು.
Advertisement
Advertisement
ಉತ್ತರ ಭಾರತದ ಹೆಚ್ಚಿನ ಭಾಗಗಳನ್ನು ದಟ್ಟವಾದ ಮಂಜು ಆವರಿಸಿದೆ. ಇದರಿಂದಾಗಿ ವಿಮಾನ ಪ್ರಯಾಣಿಕರಿಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳಿಂದ ದೇಶದ ಉತ್ತರ ಭಾಗಗಳ ಮೇಲೆ ಪರಿಣಾಮ ಬೀರುತ್ತಿರುವ ಕಳಪೆ ಗೋಚರತೆಯಿಂದಾಗಿ ಬುಧವಾರ ಮತ್ತೊಮ್ಮೆ ವಿಮಾನ ಸಂಚಾರವನ್ನು ಅಡ್ಡಿಪಡಿಸಿತು.
Advertisement
ದಟ್ಟವಾದ ಮಂಜು ಗೋಚರತೆಯಿಂದಾಗಿ ಮಂಗಳವಾರ ಸುಮಾರು 6 ಗಂಟೆಗಳ ಕಾಲ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್: ಅಶ್ವಥ್ ನಾರಾಯಣ್ ಘೋಷಣೆ
Advertisement
ಈ ಹಿನ್ನೆಲೆಯಲ್ಲಿ ವಿಸ್ತಾರಾ, ಸ್ಪೈಸ್‌ಜೆಟ್ ಮತ್ತು ಇಂಡಿಗೋ ವಿಳಂಬಕ್ಕೆ ವಿಷಾದ ವ್ಯಕ್ತಪಡಿಸಿತ್ತು. ದೆಹಲಿಯಲ್ಲಿ ಮುಂಜಾನೆಯ ಮಂಜಿನಿಂದಾಗಿ ಭಾರೀ ತೊಂದರೆಗಿದೆ. ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ಇಂಡಿಗೋ ಮಂಗಳವಾರ ಹೇಳಿತ್ತು. ಇದನ್ನೂ ಓದಿ: ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು