ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನರೇಲಾದಲ್ಲಿರುವ ಪಾದರಕ್ಷೆ ಕಾರ್ಖಾನೆ (Footwear Factory) ಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ದಾರುಣವಾಗಿ ಸಾವಿಗೀಡಾದ ಘಟನೆ ನಡೆದಿದೆ.
ಘಟನೆಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಅವಘಡದಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
Advertisement
Delhi | 20 people were rescued, out of which 18 are injured and 2 dead. According to the information received, the blast happened after switching on a Polyurethane machine kept inside the factory. Investigation underway: DK Mahla, DCP pic.twitter.com/nefeAjIvKW
— ANI (@ANI) November 1, 2022
Advertisement
ಮೃತರನ್ನು 30 ರಿಂದ 35 ವರ್ಷ ವಯಸ್ಸಿನವರೆಂದು ಗುರುತಿಸಲಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಇಂದು ಬೆಳಗ್ಗೆ 9.35ರ ಸುಮಾರಿಗೆ ಅಗ್ನಿ ಅವಘಡ (Fire Accident) ಸಂಭವಿಸಿರುವ ಮಾಹಿತಿ ಸಿಕ್ಕಿದೆ. ಕೂಡಲೇ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡವು. ಆದರೂ 2 ರಿಂದ ಮೂವರು ಕಟ್ಟಡದ ಒಳಗೆ ಸಿಲುಕಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು
Advertisement
#UPDATE | The incident of fire occurred in a footwear factory in Narela Industrial Area. A few are injured and have been shifted to hospital, all are stable and have minor injuries. Two people died and their identity is being established: Delhi Police
— ANI (@ANI) November 1, 2022
Advertisement
ಅಗ್ನಿ ಅವಘಡದಲ್ಲಿ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮಾತನಾಡಿ, ಕೆಲವರು ದಟ್ಟ ಹೊಗೆಯಿಂದ ಹೊರಗೆ ಬರಲಾರದೆ ಒಳಗಡೆ ಸಿಲುಕಿದ್ದಾರೆ ಎಂದು ಶಂಕಿಸಿದ್ದಾರೆ.
ಅಗ್ನಿ ದುರಂತಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಮೊದಲು ಅಂದರೆ ಸೆಪ್ಟೆಂಬರ್ 23ರಂದು ಕೂಡ ನರೆಲಾದ ಪಾದರಕ್ಷೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದನ್ನೂ ಓದಿ: ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!