ರಣ್‌ಬೀರ್ ಕಪೂರ್ ನಟನೆಯ ಮುಂಬರುವ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದ್ದ ವೇಳೆಯಲ್ಲಿ, ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮ ಎರಡು ಬಿಗ್ ಬಜೆಟ್ ಚಿತ್ರಗಳು ರದ್ದಾಗಿದೆ.

View this post on Instagram
ಬೆಂಕಿ ಅವಗಢದಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಚಿತ್ರತಂಡದ ಕೆಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂರು ಅಗ್ನಿಶಾಮಕ ದಳಗಳು ಮತ್ತು ಎರಡು ನೀರಿನ ಟ್ಯಾಂಕರ್‌ಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ದೌಡಾಯಿಸಿವೆ. ಇನ್ನು ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿರುವ ಮೂರು ಮಹಡಿಗಳು ಸುಟ್ಟು ಹೋಗಿದೆ. ಆದರೆ ಈ ಅವಘಡ ನಡೆದ ವೇಳೆ ರಣ್‌ಬೀರ್ ಕಪೂರ್ ಮತ್ತು ಶ್ರದ್ಧಾ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
Live Tv
[brid partner=56869869 player=32851 video=960834 autoplay=true]

