InternationalLatest

ಅಗ್ನಿ ದುರಂತದಲ್ಲಿ 70 ಮಂದಿ ಸಜೀವ ದಹನ!

Advertisements

ಢಾಕಾ: ರಾಸಾಯನಿಕ ಸಂಗ್ರಹಿಸಿದ್ದ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 70 ಮಂದಿ ಸಜೀವವಾಗಿ ದಹನವಾಗಿರುವ ಘಟನೆ ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಢಾಕಾದ ಚೌಕ್‍ಬಜಾರ್ ಪ್ರದೇಶದಲ್ಲಿ ರಾಸಾಯನಿಕ ಸಂಗ್ರಹಿಸಿದ್ದ ಕಟ್ಟಡದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಬಳಿಕ ಸಮೀಪದ ಜನವಸತಿ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಈ ದುರಂತದಲ್ಲಿ ಇದೂವರೆಗೆ ಸುಮಾರು 70 ಮಂದಿ ಸಾವನ್ನಪ್ಪಿದ್ದು, ಸುಮಾರು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಢಾಕಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸಲಾಗಿದೆ. ಹಾಗೆಯೇ ಇನ್ನಷ್ಟು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳ ಮತ್ತು ಪೊಲೀಸರು ತಿಳಿಸಿದ್ದಾರೆ.

ಚೌಕ್‍ಬಜಾರ್ ಪ್ರದೇಶದಲ್ಲಿ ಕಟ್ಟಡಗಳು ಒಂದರ ಪಕ್ಕ ಮತ್ತೊಂದು ತೀರ ಹತ್ತಿರದಲ್ಲಿದೆ. ಆದರಿಂದ ರಾಸಾಯನಿಕ ಸಂಗ್ರಹಿಸಿದ್ದ ಕಟ್ಟಡಕ್ಕೆ ತಗುಲಿದ ಬೆಂಕಿ ಸ್ವಲ್ಪ ಸಮಯದಲ್ಲಿಯೇ ಸಮೀಪದ ಅಪಾರ್ಟ್​​ಮೆಂಟ್​  ಸೇರಿ ಒಟ್ಟು ನಾಲ್ಕು ಕಟ್ಟಡಗಳಿಗೆ ತಲುಪಿದೆ. ಸತತ 9 ಗಂಟೆಗಳು ಅಗ್ನಿಶಾಮಕ ದಳ ಹರಸಾಹಸಪಟ್ಟು ಬೆಂಕಿಯನ್ನು ಕೊಂಚ ಮಟ್ಟಿಗೆ ನಿಯಂತ್ರಣಕ್ಕೆ ತಂದಿದ್ದಾರೆ.

ಈ ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹ ಬಹುತೇಕ ಸುಟ್ಟು ಹೊಗಿದ್ದು, ಮೃತಪಟ್ಟವರ ಗುರುತು ಪತ್ತೆಹಚ್ಚಲು ಆಗುತ್ತಿಲ್ಲ. ಬ್ಯಾಗ್ ಗಳನ್ನು ಬಳಸಿ ರಕ್ಷಣಾ ಸಿಬ್ಬಂದಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ. ಇದು ಬಹಳ ಕಷ್ಟಕರ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button