InternationalLatestMain Post

ಚೀನಾದ ಗಗನಚುಂಬಿ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ

ಬೀಜಿಂಗ್: ಮಧ್ಯ ಚೀನಾದ(China) ಚಾಂಗ್ಶಾ(Changsha) ನಗರದ ಗಗನಚುಂಬಿ ಕಟ್ಟಡದಲ್ಲಿ(Skyscraper) ಭಾರಿ ಬೆಂಕಿ(Fire) ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲಾ ಮಹಡಿಗಳಿಗೂ ಬೆಂಕಿ ಹರಡಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಸಾವು ನೋವುಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.

ವರದಿಗಳ ಪ್ರಕಾರ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿ ಇರುವ ಎತ್ತರದ ಕಟ್ಟಡಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಹಾಗೂ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾಜಿ ಗೆಳತಿಯ ಜೊತೆ ಮಸ್ಕ್ ಫೋಟೋ – ಭಾರೀ ಮೊತ್ತಕ್ಕೆ ಸೇಲ್

ಸ್ಥಳೀಯ ಸುದ್ದಿಸಂಸ್ಥೆ ಬಿಡುಗಡೆ ಮಾಡಿದ ಛಾಯಾಚಿತ್ರದಲ್ಲಿ ಗಗನಚುಂಬಿ ಕಟ್ಟದ ಉದ್ದಕ್ಕೂ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ಕಟ್ಟಡದ ಕೊನೆಯ ಮಹಡಿಯವರೆಗೂ ಬಹುತೇಕ ಪಾಲು ಸುಟ್ಟು ಕರಕಲಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿ

Live Tv

Leave a Reply

Your email address will not be published.

Back to top button