ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಏಮ್ಸ್‌ನಲ್ಲಿ (AIIMS) ಸೋಮವಾರ ಭಾರೀ ಅಗ್ನಿ ಅವಘಡ (Fire) ಸಂಭವಿಸಿದೆ.
ವರದಿಗಳ ಪ್ರಕಾರ ಬೆಂಕಿ ನಂದಿಸಲು ಘಟನಾ ಸ್ಥಳಕ್ಕೆ 6 ಅಗ್ನಿಶಾಮಕ ವಾಹನಗಳು ಆಗಮಿಸಿವೆ. ಘಟನೆ ವೇಳೆ ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳು ಹಾಗೂ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
Advertisement
#WATCH | Delhi: A fire broke out in the endoscopy room of AIIMS. All people evacuated.
More than 6 fire tenders sent, say Delhi Fire Service
Further details are awaited. pic.twitter.com/u8iomkvEpX
— ANI (@ANI) August 7, 2023
Advertisement
ಏಮ್ಸ್‌ನ ತುರ್ತು ಚಿಕಿತ್ಸಾ ವಿಭಾಗದ ಮೇಲಿರುವ ಎಂಡೋಸ್ಕೋಪಿ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ. ಇದನ್ನೂ ಓದಿ: Breaking: ಅನರ್ಹತೆ ವಾಪಸ್ ಪಡೆದ ಲೋಕಸಭೆ ಸ್ಪೀಕರ್ – ಇಂದು ಸಂಸತ್ ಕಲಾಪಕ್ಕೆ ರಾಹುಲ್ ಗಾಂಧಿ
Advertisement
ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕರೆ ಬರುತ್ತಲೇ ಸುತ್ತಮುತ್ತಲಿನ ಎಲ್ಲಾ ರೋಗಿಗಳು ಹಾಗೂ ಸಿಬ್ಬಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಎಂಡೋಸ್ಕೋಪಿ ಕೊಠಡಿ ಹಳೆಯ ಹೊರರೋಗಿ ವಿಭಾಗದ ಎರಡನೇ ಮಹಡಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಬ್ಯಾಟಿಂಗ್ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ
Advertisement
Web Stories