ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಬಲೂಚಿಸ್ತಾನ (Balochistan) ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ಭಾರೀ ಸ್ಫೋಟದಲ್ಲಿ (Blast) 25 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯ ಮಸೀದಿಯೊಂದರ ಬಳಿ ಭಾರೀ ಸ್ಫೋಟ ಸಂಭವಿಸಿದೆ. ಮಸೀದಿಯ ಬಳಿ ಜನರು ಸೇರಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕೂಡಾ ಸೇರಿದ್ದಾರೆ ಎನ್ನಲಾಗಿದೆ.
Advertisement
Advertisement
ಮಸ್ತುಂಗ್‌ನ ಸಹಾಯಕ ಕಮಿಷನರ್ ಅಟ್ಟಾ ಉಲ್ ಮುನಿಮ್ ಮದೀನಾ ಮಸೀದಿ ಬಳಿ ಸಂಭವಿಸಿದ ಸ್ಫೋಟ ತೀವ್ರ ಸ್ವರೂಪದ್ದಾಗಿತ್ತು ಎಂದು ವಿವರಿಸಿದ್ದಾರೆ. ಸ್ಫೋಟದಲ್ಲಿ ಬಲಿಯಾದ ಡಿಎಸ್‌ಪಿಯನ್ನು ನವಾಜ್ ಗಶ್ಕೋರಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಬಿಸಿ – 60 ವಿಮಾನ ರದ್ದು
Advertisement
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎನ್ನಲಾಗಿದೆ.
Advertisement
ಈ ವರ್ಷ ಸೆಪ್ಟೆಂಬರ್‌ನಲ್ಲಿ ಮಸ್ತುಂಗ್ ಜಿಲ್ಲೆಯಲ್ಲಿ ನಡೆದ 2ನೇ ದೊಡ್ಡ ಸ್ಫೋಟ ಇದಾಗಿದೆ. ಈ ತಿಂಗಳ ಆರಂಭದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ ಫಝಲ್ (ಜೆಯುಐ-ಎಫ್) ನಾಯಕ ಹಫೀಜ್ ಹಮ್ದುಲ್ಲಾ ಸೇರಿದಂತೆ ಹಲವರು ಗಾಯಗೊಂಡಿದ್ದರು. ಇದನ್ನೂ ಓದಿ: ಟಿವಿ ಸ್ಟುಡಿಯೋದಲ್ಲೇ ಹೊಡೆದಾಡಿಕೊಂಡ ರಾಜಕಾರಣಿಗಳು
Web Stories