ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಬಳಿ ಸೋಮವಾರ ಭಾರೀ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ರಷ್ಯಾದ ಇಬ್ಬರು ರಾಜತಾಂತ್ರಿಕರು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಜನರು ವೀಸಾಕ್ಕಾಗಿ ರಾಯಭಾರ ಕಚೇರಿಯ ಹೊರಗಡೆ ಗೇಟ್ ಬಳಿ ನಿಂತಿದ್ದಾಗ ಸ್ಫೋಟ ಸಂಭವಿಸಿದೆ. ಈಗಾಗಲೇ 20 ಜನರು ಸಾವನ್ನಪ್ಪಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ರಿಷಿಗೆ ಸೋಲು – ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ ಲಿಜ್ ಟ್ರಸ್
Advertisement
Advertisement
ಆತ್ಮಹತ್ಯಾ ಬಾಂಬರ್‌ನಿಂದಾಗಿ ಸ್ಫೋಟ ಸಂಭವಿಸಿದೆ. ದಾಳಿಗೂ ಮೊದಲೇ ಆತ್ಮಹತ್ಯಾ ಬಾಂಬರ್‌ನನ್ನು ತಾಲಿಬಾನ್ ಗಾರ್ಡ್‌ಗಳು ಗುರುತಿಸಿದ್ದರು. ಅವರು ಗುಂಡು ಹಾರಿಸುತ್ತಿದ್ದಂತೆಯೇ ಆತ್ಮಹತ್ಯಾ ಬಾಂಬರ್ ತನ್ನ ಬಳಿಯಿದ್ದ ಸ್ಫೋಟಕ ಸಾಧನವನ್ನು ಸಕ್ರಿಯಗೊಳಿಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ
Advertisement
ಕೇವಲ 2 ದಿನಗಳ ಹಿಂದೆಯಷ್ಟೇ ವಾಯುವ್ಯ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿ 20 ಜನರು ಸಾವನ್ನಪ್ಪಿದ್ದರು. ಹೆರಾತ್ ನಗರದ ಗುಜರ್ಗಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಬಾಂಬ್ ದಾಳಿ ನಡೆದಿದ್ದಾಗಿ ವರದಿಯಾಗಿದೆ.