– ಸೌರ ವಿದ್ಯುತ್ ಸ್ಥಾವರಗಳಿಗೆ ಶೇ.76ರಷ್ಟು ಸುಂಕ ಇಳಿಸಿ ಉತ್ತೇಜನ
ನವದೆಹಲಿ: ಭಾರತ ಇಂದು ಪ್ರಧಾನಿ ಮೋದಿ (PM Modi) ಜೀ ಅವರ ನಾಯಕತ್ವದಲ್ಲಿ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮೆಚ್ಚುಗೆ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ (New Delhi) ಹನಿವೆಲ್ ಮತ್ತು CNBC-TV18 ಆಯೋಜಿಸಿದ್ದ ಭಾರತ ಶಕ್ತಿ ಪರಿವರ್ತನಾ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಾಗತಿಕವಾಗಿ ಇಂಧನ ಕ್ಷೇತ್ರದಲ್ಲಿ ಶುದ್ಧ ಮತ್ತು ಸುಸ್ಥಿರ ಇಂಧನಕ್ಕಾಗಿ (Sustainable Energy) ಭಾರತ ಪ್ರಭಾವಶಾಲಿ ಹೆಜ್ಜೆಯನ್ನಿಟ್ಟಿದೆ. ಆರ್ಥಿಕತೆ ಜೊತೆಗೆ ಪರಿಸರ ಕಾಳಜಿ, ನಿರ್ವಹಣೆಗೂ ಮಹತ್ವ ನೀಡಿದೆ ಎಂದು ಹೇಳಿದರು.
ಸೌರ ವಿದ್ಯುತ್ ಸ್ಥಾವರ ಸುಂಕ ಶೇ.76 ಇಳಿಕೆ: ಸೌರ ವಿದ್ಯುತ್ (Solar Power) ಉತ್ಪಾದನೆಗೆ ಉತ್ತೇಜನ ನೀಡಲೆಂದು ಭಾರತ ಸರ್ಕಾರ ಗ್ರಿಡ್ ಸಂಪರ್ಕಿತ ಸೌರ ವಿದ್ಯುತ್ ಸ್ಥಾವರಗಳಿಗೆ ಇದ್ದ ಸುಂಕವನ್ನು ಶೇ.76ರಷ್ಟು ಇಳಿಸಿದೆ. 2010-11ರಲ್ಲಿ ರೂ.10.95 ಇದ್ದ ಸುಂಕ 2023-24 ರ ಅವಧಿಯಲ್ಲಿ ಕೇವಲ ರೂ.2.60ಗೆ ಇಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ
ನವೀಕರಿಸಬಹುದಾದ ಇಂಧನ (Renewable Energy) ಕ್ಷೇತ್ರ ಭಾರತೀಯ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತದ ತ್ವರಿತ ಬೆಳವಣಿಗೆ ಮತ್ತು ಆರ್ಥಿಕತೆ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಈ ಕ್ಷೇತ್ರದಲ್ಲಿ ಭಾರತ ಒಂದು ಸ್ಪರ್ಧಾತ್ಮಕ ಉದ್ಯಮವನ್ನೇ ಸೃಷ್ಟಿಸಲಿದೆ. ಅಷ್ಟರ ಮಟ್ಟಿಗೆ ಸದೃಢವಾಗಿದೆ. ಭಾರತದಲ್ಲಿ ಸೌರಶಕ್ತಿಯ ವೆಚ್ಚ ವಿಶ್ವದಲ್ಲೇ ಅತ್ಯಂತ ಅಗ್ಗವಾಗಿದೆ ಎಂದು ಶ್ಲಾಘಿಸಿದರು.
ಹೆಚ್ಚುವರಿ ವಿದ್ಯುಚ್ಛಕ್ತಿ ಸಂಗ್ರಹಿಸಲು ಯೋಜಿಸಿದ್ದು, ದೊಡ್ಡ ಪ್ರಮಾಣದ ಗ್ರಿಡ್ ಸಂಗ್ರಹಣೆಯಲ್ಲಿ ಯಶಸ್ಸು ಅತ್ಯಗತ್ಯ. ಇದಕ್ಕಾಗಿ PSP ಯೋಜನೆಗಳ ಅಭಿವೃದ್ಧಿಗೆ ವೇಗ ನೀಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಗಣೇಶ ಮತ್ತೆ ಬಂದ.. ಪರಿಸರ ಸ್ನೇಹಿ ಮೂರ್ತಿಯ ಪ್ರಯೋಜನ ನಿಮಗೆಷ್ಟು ಗೊತ್ತು?
24,000 ಕೋಟಿ ರೂ. ವೆಚ್ಚದಲ್ಲಿ ಹೆಚ್ಚಿನ ದಕ್ಷತೆಯ ಸೌರ PV ಮಾದರಿ ಘಟಕಕ್ಕೆ PLI ಯೋಜನೆ ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ 48,337 MW ಸಾಮರ್ಥ್ಯದ ಉನ್ನತ-ದಕ್ಷತೆಯ ಸೌರ PV ಮಾದರಿಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 10 ವರ್ಷಗಳಲ್ಲಿ 75.52 GW ನಿಂದ 203 GW ಗಿಂತ ಹೆಚ್ಚಾಗಿದೆ. 165 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. ಭಾರತದಲ್ಲಿ ಒಟ್ಟು ಆರ್‌ಇ ಉತ್ಪಾದನೆಯು 193.50 ಬಿಲಿಯನ್ ಯುನಿಟ್‌ಗಳಿಂದ 2023-24ರಲ್ಲಿ 360 ಬಿಲಿಯನ್ ಯುನೈಟ್‌ಗೆ ಏರಿಕೆಯಾಗಿದೆ, ಇದು ಶೇ.86ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: Kolkata Horror | ಆರ್.ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!
3 ತಿಂಗಳಲ್ಲಿ 2.5 ಲಕ್ಷಕ್ಕೂ ಅಧಿಕ ಸೂರ್ಯ ಘರ್:
ತಾವು ನವೀಕರಿಸಬಹುದಾದ ಇಂಧನ ಖಾತೆ ವಹಿಸಿಕೊಂಡ ಮೇಲೆ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಛಾವಣಿಗಳಲ್ಲಿ ಸೌರ ಘಟಕಗಳನ್ನು ಸ್ಥಾಪಿಸಲಾಗಿದೆ. ಒಟ್ಟು 3.28 ಲಕ್ಷ ಅಳವಡಿಕೆಗಳ ಪೈಕಿ ಶೇ.75ಕ್ಕೂ ಹೆಚ್ಚು ಈ ಮೂರು ತಿಂಗಳಲ್ಲಿ ಆಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.