ರಷ್ಯಾದ ಕರಾವಳಿಯಲ್ಲಿ 8.7 ತೀವ್ರತೆಯ ಭಾರೀ ಭೂಕಂಪ – ಅಮೆರಿಕ, ಜಪಾನ್‌ಗೆ ಸುನಾಮಿ ಎಚ್ಚರಿಕೆ

Public TV
1 Min Read
Earthquake General Photo

ಮಾಸ್ಕೋ: ರಷ್ಯಾದ ಕರಾವಳಿ (Russian Coast) ಪ್ರದೇಶದಲ್ಲಿ 8.7 ತೀವ್ರತೆಯ ಭಾರೀ ಭೂಕಂಪ (Earthquake) ಸಂಭವಿಸಿದೆ. ಇದು 1952ರ ಬಳಿಕ ಸಂಭವಿಸಿದ ಅತೀ ಪ್ರಬಲ ಭೂಕಂಪವಾಗಿದೆ. ಅಮೆರಿಕದ ಅಲಾಸ್ಕಾದ ಭಾಗಗಳು ಹಾಗೂ ಜಪಾನ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಇಲ್ಲಿನ ಪೂರ್ವ ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್‌ ನಿಂದ ಸುಮಾರು 136 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ. 19 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದು, 4 ಮೀಟರ್‌ ನಷ್ಟು ಎತ್ತರ ಅಲೆಗಳ ಮೂಲಕ ಸುನಾಮಿ ಅಪ್ಪಳಿಸಲಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರಕ್ಕೆ ಜಾಗತಿಕ ಬೆಂಬಲ ಸಿಕ್ತು, ಆದ್ರೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ: ಮೋದಿ ಬೇಸರ

Earthquake

ಅಮೆರಿಕದ ಅಧಿಕಾರಿಗಳು ಅಲಾಸ್ಕಾದ ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಜಪಾನ್‌ನ ಹವಾಮಾನ ಇಲಾಖೆಯು ಸುನಾಮಿ ಎಚ್ಚರಿಕೆ ನೀಡಿದೆ. ಕಮ್ಚಟ್ಕಾದ ಕೆಲವು ಭಾಗಗಳಲ್ಲಿ 3-4 ಮೀಟರ್ (10-13 ಅಡಿ) ಎತ್ತರದ ಸುನಾಮಿ ದಾಖಲಾಗಿಋುವುದಾಗಿ ಪ್ರಾದೇಶಿಕ ಸಚಿವ ಸೆರ್ಗೆಯ್ ಲೆಬೆಡೆವ್ ತಿಳಿಸಿದ್ದಾರೆ.  ಇದನ್ನೂ ಓದಿ: ವಿಶ್ವದ ಯಾವ ನಾಯಕನೂ ಆಪರೇಷನ್ ಸಿಂಧೂರ ನಿಲ್ಲಿಸಲು ಹೇಳಲಿಲ್ಲ: ಟ್ರಂಪ್, ವಿಪಕ್ಷಗಳಿಗೆ ಮೋದಿ ತಿರುಗೇಟು

ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು 19.3 ಕಿಮೀ (12 ಮೈಲುಗಳು) ಆಳದಲ್ಲಿ ಪತ್ತೆಯಾಗಿದೆ. ಸದ್ಯಕ್ಕೆ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ರಷ್ಯಾದ ಬಳಿ ಸಂಭವಿಸಿದ ಪ್ರಬಲ ಭೂಕಂಪದ ಕಾರಣ, ಜಪಾನ್ ದೇಶದಲ್ಲೂ ಸುನಾಮಿ ಎಚ್ಚರಿಕೆ ನೀಡಿದೆ. ಒಂದು ಮೀಟರ್ ಎತ್ತರದ ಅಲೆಗಳು ಜಪಾನ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ರಷ್ಯಾದಲ್ಲಿ ಸಂಭವಿಸಿದ ಭೂಕಂಪದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಸದ್ದು ಮಾಡ್ತಿದೆ. ಇದನ್ನೂ ಓದಿ: ಇಂದಿರಾಗಾಂಧಿಯ ಅರ್ಧದಷ್ಟು ಧೈರ್ಯ ಇದ್ರೆ ಟ್ರಂಪ್‌ ಸುಳ್ಳುಗಾರ ಎಂದು ಮೋದಿ ಹೇಳಲಿ: ರಾಹುಲ್‌ ಗಾಂಧಿ ಸವಾಲ್‌

Share This Article