ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಸಚಿವ ಸತ್ಯೇಂದ್ರ ಜೈನ್ಗೆ (Satyendar Jain) ತಿಹಾರ್ ಜೈಲಿನಲ್ಲಿ (Tihar Jail) ವ್ಯಕ್ತಿಯೊಬ್ಬರು ಮಸಾಜ್ (Massage) ಮಾಡುತ್ತಿರುವ ಹಳೆಯ ವೀಡಿಯೊವನ್ನು ಬಿಜೆಪಿ (BJP)ಶನಿವಾರ ಬಿಡುಗಡೆ ಮಾಡಿದೆ. ಜೈನ್ಗೆ ವಿಐಪಿ ಸೌಕರ್ಯ ನೀಡಿರುವ ಆರೋಪದ ಮೇಲೆ ಕೆಲ ದಿನಗಳ ಹಿಂದೆ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಮೂಲಗಳ ಪ್ರಕಾರ, ಈ ವೀಡಿಯೋ ಹಳೆಯದ್ದಾಗಿದೆ. ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿ ವಿರುದ್ಧ ಜೈಲು ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.
Advertisement
So instead of Sazaa – Satyendra Jain was getting full VVIP Mazaa ? Massage inside Tihar Jail? Hawalabaaz who hasn’t got bail for 5 months get head massage !Violation of rules in a jail run by AAP Govt
This is how official position abused for Vasooli & massage thanks to Kejriwal pic.twitter.com/4jEuZbxIZZ
— Shehzad Jai Hind (@Shehzad_Ind) November 19, 2022
Advertisement
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೇ 30ರಂದು ಬಂಧಿತರಾಗಿರುವ ಸತ್ಯೇಂದ್ರ ಜೈನ್ಗೆ ತಿಹಾರ್ ಜೈಲಿನಲ್ಲಿ ವಿಐಪಿ ಸೌಕರ್ಯ ನೀಡಲಾಗುತ್ತಿದೆ. ತಲೆ, ಪಾದ ಮತ್ತು ಬೆನ್ನಿಗೆ ಮಸಾಜ್ ಮಾಡುವಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳು ರಿಲೀಸ್
Advertisement
ದೆಹಲಿ ಸಚಿವರು ಜೈಲಿನಲ್ಲಿ ಐಷಾರಾಮಿ ಜೀವನವನ್ನು ನಡೆಸಿರುವುದಕ್ಕೆ ಸಂಬಂಧಿಸಿದಂತೆ ಹಣಕಾಸು ಸಂಸ್ಥೆ ನ್ಯಾಯಾಲಯಕ್ಕೆ ಪುರಾವೆಗಳನ್ನು ಸಲ್ಲಿಸಿದೆ. ಅಪರಿಚಿತ ವ್ಯಕ್ತಿಗಳು ಸತ್ಯೇಂದ್ರ ಜೈನ್ಗೆ ಮಸಾಜ್ ಹಾಗೂ ವಿಶೇಷ ಆಹಾರವನ್ನು ನೀಡಲಾಗುತ್ತಿದೆ ಎಂದು ಇಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್ವಿ ರಾಜು ಹೇಳಿದ್ದಾರೆ.
Advertisement
ಈ ಹಿಂದೆ ಜೈನ್ಗೆ ವಿಶೇಷ ಸೌಲಭ್ಯ ನೀಡಿದ ಆರೋಪಗಳನ್ನು ಆಮ್ ಆದ್ಮಿ ಪಕ್ಷ ತಳ್ಳಿಹಾಕಿತ್ತು, ಅವುಗಳನ್ನು ಅಸಂಬದ್ಧ ಮತ್ತು ಆಧಾರರಹಿತ ಎಂದು ಕರೆದಿತ್ತು. ಇದನ್ನೂ ಓದಿ: ಹಾಸನದಲ್ಲಿ ನಾಪತ್ತೆಯಾಗಿದ್ದ 7ನೇ ತರಗತಿ ವಿದ್ಯಾರ್ಥಿನಿ ಪತ್ತೆ – ಬಾಲಕಿಯನ್ನು ಕರೆದೊಯ್ದಿದ್ದ ಮಹಿಳೆ