ರಾಂಚಿ: ಒಂದೇ ಕುಟುಂಬದ 5 ಜನರು ನೇಣು ಹಾಕಿಕೊಂಡು ಮತ್ತೊಬ್ಬರು ಮನೆ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ನಡೆದಿದೆ.
ಮಾರವಾಡಿ ಕುಟುಂಬದ ಮಾಹಾವೀರ್ ಮಹೇಶ್ವರಿ (70), ಪತ್ನಿ ಕಿರಣ್ ಮಹೇಶ್ವರಿ (60), ಪುತ್ರ ನರೇಶ್ ಅಗರರ್ವಾಲ್ (40), ಪ್ರೀತಿ ಅಗರ್ವಾಲ್ (38), ಇವರ ಮಕ್ಕಳಾದ ಅಮನ್ (8) ಹಾಗೂ ಅಂಜಲಿ (6) ಮೃತರು.
ಮನೆಯ ಮೇಲ್ಛಾವಣಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಮನೆಯನ್ನು ಪರಿಶೀಲನೆ ಮಾಡುವ ಐವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಮೃತರ ಮನೆಯಲ್ಲಿ ಆತ್ಮಹತ್ಯೆ ಪತ್ರ ಲಭಿಸಿದೆ. ಮೃತರ ಕುಟುಂಬವು ಒಣ ಹಣ್ಣಿನ (ಡ್ರೈ ಫ್ರುಟ್ಸ್) ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಸಾಲ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಕೌಟುಂಬಿಕ ಕಲಹವೂ ಇತ್ತು ಎಂದು ವರದಿಯಾಗಿದೆ.