ನವದೆಹಲಿ: ನಗರದ ಬುರಾರಿ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಗೆ ಸ್ಫೋಟಕ ತಿರುವು ಸಿಕ್ಕಿದೆ.
ಹತ್ಯೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಸದ್ಯ ಮೃತರ ಮನೆಯಲ್ಲಿ ಕೆಲವು ಪತ್ರಗಳು ದೊರೆತಿದ್ದು, ಇದು ಹತ್ಯೆಯಲ್ಲ, ಮೂಢನಂಬಿಕೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
Advertisement
ಏನಿದೆ ಪತ್ರದಲ್ಲಿ:
`ಮನುಷ್ಯನ ದೇಹ ಶಾಶ್ವತವಲ್ಲ. ಆತ್ಮವಷ್ಟೇ ಶಾಶ್ವತ. ಕಣ್ಣು ಮತ್ತು ಬಾಯಿಯನ್ನು ಮುಚ್ಚುವ ಮೂಲಕ ಭಯದಿಂದ ಹೊರ ಬರಬಹುದು’ ಅಂತಾ ಬರೆಯಲಾಗಿದೆ. ಜೊತೆಗೆ ಕೈ-ಕಾಲನ್ನು ಕಟ್ಟಿ ಹಾಕುವುದು ಹೇಗೆ ಎಂದು ಆ ಪತ್ರಗಳಲ್ಲಿ ವಿವರಿಸಲಾಗಿದೆ.
Advertisement
ಕುಟುಂಬ ಹಿರಿಯರಾದ ನಾರಾಯಣಿ ಭಾಟಿಯಾ (77), ಮಕ್ಕಳಾದ ಭಾವನೇಶ್ (50) ಮತ್ತು ಲಲಿತ್ (45), ಸವಿತಾ ಭಾವನೇಶ್ (48) ಮತ್ತು ತೀನಾ ಲಲಿತ್ (42). ಭಾವನೇಶ್ ಅವರ ಮಕ್ಕಳಾದ ನೀತು (25), ಮೊನು (23) ಮತ್ತು ದೃವ (15) ಹಾಗು ಲಲಿತ್ ಅವರ ಮಗ ಶಿವಂ (15). ನಾರಾಯಣಿ ಅವರ ಹಿರಿಯ ಮಗಳು ಪ್ರತಿಭಾ (57) ಮೊಮ್ಮಗಳು ಪ್ರಿಯಾಂಕಾ (33) ಆತ್ಮಹತ್ಯೆ ಮಾಡಿಕೊಂಡವರು.