ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಸೋಮವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಹಲವು ಜನ ನಿರಾಶ್ರಿತರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಬ್ರಿಟಿಷ್ ಕೊಲಂಬಿಯಾದ ಲಾಂಗ್ಲಿ ನಗರದಲ್ಲಿ ಗುಂಡಿನ ದಾಳಿ ಪ್ರಾರಂಭವಾಗುತ್ತಲೇ ಪೊಲೀಸರು ತುರ್ತು ಎಚ್ಚರಿಕೆಯನ್ನು ನೀಡಿದ್ದರು. ಘಟನೆಯ ಪ್ರದೇಶದಿಂದ ಜಾಗರೂಕರಾಗಿರಲು ಹಾಗೂ ದೂರವಿರಲು ನಿವಾಸಿಗಳನ್ನು ಕೇಳಿಕೊಂಡಿದ್ದರು. ಆದರೆ ಇಂದಿನ ಗುಂಡಿನ ದಾಳಿಯಿಂದಾಗಿ ಹಲವು ನಿರಾಶ್ರಿತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 939 ಮಂದಿ ಕೊರೊನಾ ಸೋಂಕು – ಓರ್ವ ಸಾವು
Advertisement
Advertisement
ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ವಕ್ತಾರರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಗುಂಡಿನ ದಾಳಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ನಿರ್ದಿಷ್ಟವಾಗಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ. ವರದಿಗಳ ಪ್ರಕಾರ ನಿರಾಶ್ರಿತರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನು ನಡೆಸಲಾಗಿದೆ. ಶಂಕಿತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ