ಬರ್ನ್: ಗೂಗಲ್ (Google) ಕಂಪನಿ ಉದ್ಯೋಗಿಗಳ (Employees) ಸಾಮೂಹಿಕ ವಜಾ (Layoff) ಮುಂದುವರಿಸಿದ್ದು, ಇದೀಗ 200 ಉದ್ಯೋಗಿಗಳನ್ನು ವಜಾಗೊಳಿಸಿರುವ ಹಿನ್ನೆಲೆ ಸ್ವಿಟ್ಜರ್‌ಲೆಂಡ್‌ನ (Switzerland) ಜ್ಯೂರಿಯಲ್ಲಿರುವ ಕಂಪನಿಯ ಕಚೇರಿಯಲ್ಲಿ ಉದ್ಯೋಗಿಗಳು ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದ್ದಾರೆ.
ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಜನವರಿಯಲ್ಲಿ ಪ್ರಪಂಚದಾದ್ಯಂತ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದು ಜಾಗತಿಕವಾಗಿ ಶೇ.9 ರಷ್ಟು ಕಂಪನಿಯ ಉದ್ಯೋಗಿಗಳಿಗೆ ಸಮವಾದ ಸಂಖ್ಯೆಯಾಗಿದೆ. ಇದೀಗ ಗೂಗಲ್ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.
Advertisement
Advertisement
ಸುಮಾರು 5,000 ಉದ್ಯೋಗಿಗಳಿರುವ ಗೂಗಲ್‌ನ ಜ್ಯೂರಿ ಕಚೇರಿಯಲ್ಲಿ ಕಳೆದ ತಿಂಗಳು ಉದ್ಯೋಗಿಗಳನ್ನು ಕಡಿತಗೊಳಿಸುವುದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಬೆಂಬಲಿಸಿ ಇತರ ಉದ್ಯೋಗಿಗಳು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆಪಲ್
Advertisement
ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಲ್ಲಿ ಪಾರದರ್ಶಕತೆಯನ್ನು ತೋರ್ಪಡಿಸಲಾಗುತ್ತಿಲ್ಲ. ಕಂಪನಿ ಪ್ರತಿ ವರ್ಷ ಭಾರೀ ಲಾಭ ಗಳಿಸುತ್ತಿರುವ ಸಮಯದಲ್ಲಿಯೂ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಅವರಲ್ಲಿ ನಿರಾಸೆ ಮೂಡಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವುದರ ಬಗ್ಗೆ ಗೂಗಲ್ ವಕ್ತಾರರು, ಕಂಪನಿಯು ಅಗತ್ಯಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಹಿನ್ನೆಲೆ ಕಡಿತಗೊಳಿಸಲು ಮುಂದಾಗಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ