ಟಾಲಿವುಡ್ ನಟ ರವಿತೇಜ (Ravi Teja) ಸದಾ ಹೊಸ ಬಗೆಯ ಪಾತ್ರಗಳ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಅವರ ಮುದ್ದಿನ ಮಗಳು ಮೋಕ್ಷಧಾ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಭಾರತದಲ್ಲೇ ಮೊದಲ ಬಾರಿಗೆ ಅನಿರುದ್ಧ್ ಹುಕುಂ ಟೂರ್
ರವಿತೇಜ ಮಗ ಮಹಾಧನ್ ನಿರ್ದೇಶಕನಾಗುವ ಕನಸು ಕಾಣುತ್ತಿದ್ದಾರೆ. ಇತ್ತ ಪುತ್ರಿ ಮೋಕ್ಷಧಾ (Mokshadha) ನಿರ್ಮಾಪಕಿಯಾಗುವ ನಿರ್ಣಯಕ್ಕೆ ಬಂದಿದ್ದಾರೆ. ಸಿನಿಮಾವೊಂದರಲ್ಲಿ ಕಾರ್ಯಕಾರಿ ನಿರ್ಮಾಪಕಿ ಆಗಿ ಅವರು ಕೈಜೋಡಿಸಲಿದ್ದಾರೆ. ಇದನ್ನೂ ಓದಿ:ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್ ಗೌಡ – ರಜತ್ ನಡುವೆ ಬಿರುಕು?
ವಿನೋದ್ ನಿರ್ದೇಶನದ ಹಾಗೂ ಆನಂದ್ ದೇವರಕೊಂಡ ನಟನೆಯ ಸಿನಿಮಾದಲ್ಲಿ ಮೋಕ್ಷಧಾ ಕಾರ್ಯಕಾರಿ ನಿರ್ಮಾಪಕಿ ಆಗಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸಿತಾರಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರವಿತೇಜ ಅವರ ನಿರ್ಮಾಣ ಸಂಸ್ಥೆ ನೋಡಿಕೊಳ್ಳಲು ಈಗ ತರಬೇತಿ ಪಡೆಯುತ್ತಿದ್ದಾರೆ. ಈ ವಿಚಾರದ ಕುರಿತು ಇನ್ನೂ ಅಧಿಕೃತ ಘೋಷಣೆ ಆಗಬೇಕಿದೆ.
ಅಂದಹಾಗೆ, ಶ್ರೀಲೀಲಾ ಜೊತೆ ರವಿತೇಜ ‘ಮಾಸ್ ಜಾತ್ರಾ’ ಎಂಬ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.