10 ನೇ ತರಗತಿ ಬೋರ್ಡ್ ಪರೀಕ್ಷೆ ವೇಳೆ ಚೀಟಿ ಪಾಸ್‌ ಮಾಡಲು ಗೋಡೆ ಏರಿದ್ರು!

Public TV
1 Min Read
BOARD EXAM

ಚಂಡೀಗಢ: ಹರಿಯಾಣದ ನುಹ್ ಜಿಲ್ಲೆಯ ಶಾಲೆಯೊಂದರಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಯ (10th Board Exam) ಸಂದರ್ಭದಲ್ಲಿ ನಕಲಿಗೆ ಸಹಕರಿಸಿರುವ ವಿಚಾರ ಬಯಲಾಗಿದೆ.

ನುಹ್ ಜಿಲ್ಲೆಯ ತೌರುನಲ್ಲಿರುವ ಚಂದ್ರಾವತಿ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಪರೀಕ್ಷೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

ಇದಕ್ಕೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿ ಜನರು ಬೋರ್ಡ್ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಚೀಟಿ ರವಾನಿಸಲು ಶಾಲೆಯ ಗೋಡೆಗಳನ್ನು ಏರುತ್ತಿರುವುದನ್ನು ಕಾಣಬಹುದಾಗಿದೆ. ಈ ಸಂಬಂಧ ವಿದ್ಯಾರ್ಥಿಗಳ ಜೊತೆಗಿದ್ದ ಪೋಷಕರು ಮತ್ತು ಸಂಬಂಧಿಕರು ಪರೀಕ್ಷೆಯ ಹೊರಗೆ ಗಲಾಟೆ ಸೃಷ್ಟಿಸಿದರು.

ಕೆಲವು ಮಕ್ಕಳು ಶಾಲೆಯ ಛಾವಣಿಯ ಮೇಲೆ ಹತ್ತಿದ ವೀಡಿಯೋ ನಾನು ನೋಡಿದೆ. ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಪರಮಜೀತ್ ಚಹಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ- ಸರ್ಕಾರಕ್ಕೆ ತೇಜಸ್ವಿ ಸೂರ್ಯ ಎಚ್ಚರಿಕೆ

ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪರೀಕ್ಷಾ ಕೇಂದ್ರಗಳ ಹೊರಗೆ ಪೊಲೀಸರ ನಿಯೋಜನೆಯನ್ನು ಹೆಚ್ಚಿಸಲು ಶಿಕ್ಷಣ ಮಂಡಳಿಯು ಪೊಲೀಸರನ್ನು ವಿನಂತಿಸುತ್ತದೆ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಧರಂಪಾಲ್ ಹೇಳಿದರು.

Share This Article