ರಾಯಚೂರು: ಜಿಲ್ಲೆಯ ಮಸ್ಕಿಯಲ್ಲಿ (Maski) ನಾಲ್ಕು ಸಾವಿರ ವರ್ಷಗಳ ಹಿಂದೆ ಜನವಸತಿ ಇದ್ದ ಬಗ್ಗೆ ಸಂಶೋಧಕರ ಉತ್ಖನನದಿಂದ ಬೆಳಕಿಗೆ ಬಂದಿದೆ.
ಸಾಮ್ರಾಟ್ ಅಶೋಕನ ಶಿಲಾಶಾಸನದಿಂದ ವಿಶ್ವ ಪ್ರಸಿದ್ಧಿ ಪಡೆದ ಮಸ್ಕಿಯ ಬಗ್ಗೆ ಈಗ ಹೊಸ ವಿಷಯ ಹೊರಬಂದಿದೆ. ಅಮೆರಿಕಾ, ಕೆನಡಾ ಹಾಗೂ ಭಾರತದ 20 ಜನ ಸಂಶೋಧಕರ ತಂಡದಿಂದ ಉತ್ಕನನ ನಡೆದಿದೆ. ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನ ಸೇರಿ ತಾಲೂಕಿನ ಹಲವೆಡೆ ಉತ್ಖನನ ಮಾಡಲಾಗುತ್ತಿದೆ. ಉತ್ಖನನ ವೇಳೆ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪಳೆಯುಳಿಕೆಗಳ ಸಂಗ್ರಹ ಮಾಡಲಾಗಿದೆ.ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
ಉತ್ಖನನ ಹಾಗೂ ಸಂಶೋಧನೆಗಾಗಿ 271 ಸ್ಥಳಗಳನ್ನು ಗುರುತಿಸಿಕೊಂಡಿರುವ ತಂಡ 11 ರಿಂದ 14ನೇ ಶತಮಾನದಲ್ಲಿ ಜನವಸತಿ ಇರುವ ಬಗ್ಗೆ ಸಂಶೋಧನೆ ನಡೆಸಿದೆ. ಅವರು ಬಳಸುತ್ತಿದ್ದ ಮನೆಗಳ ಆಕಾರ, ಮಣ್ಣಿನ ಮಡಿಕೆ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ. ಆಗಿನ ಜನರ ಜೀವನ ಮಟ್ಟ, ಆಹಾರ ಪದ್ದತಿಗಳ ಬಗ್ಗೆ ಸಂಶೋಧನೆ ನಡೆದಿದೆ.
ಕೇಂದ್ರದ ಪುರಾತತ್ವ ಇಲಾಖೆಯ ಅನುಮತಿ ಪಡೆದು ಉತ್ಖನನ ನಡೆಸಲಾಗುತ್ತಿದ್ದು, ನೊಯಿಡಾ ವಿವಿ ಪ್ರಾಧ್ಯಾಪಕ ಹೇಮಂತ್ ಕಡಾಂಬಿ, ಅಮೆರಿಕದ ಸ್ಕ್ಯಾನ್ ಪೋರ್ಡ್ ವಿವಿ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿವಿಯ ಪೀಟರ್ ಜಿ. ಜೋಹಾನ್ಸನ್ ಸೇರಿ 20 ಸಂಶೋಧಕರ ತಂಡದಿಂದ ಉತ್ಖನನ ನಡೆದಿದೆ.ಇದನ್ನೂ ಓದಿ: ಬೆಂಗಳೂರು| ಕೆಲಸಕ್ಕೆ ಹೋಗುತ್ತಿದ್ದ ಯುವತಿ ಅಪಘಾತಕ್ಕೆ ಬಲಿ