ರಾಯಚೂರು: ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಚೇರಿ ಎದುರು ವಾಮಚಾರದ (Witchcraft) ಶಂಕೆ ವ್ಯಕ್ತವಾಗಿದೆ. ಕಚೇರಿ ಮುಂಭಾಗದ ಮೂರು ರಸ್ತೆಗಳು ಸೇರುವ ಜಾಗದಲ್ಲಿ ರಾತ್ರಿ ವೇಳೆ ಅಪರಿಚಿತರು ಪೂಜೆ ನಡೆಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಂದಿಗೆಯಲ್ಲಿ ಎಕ್ಕದ ಎಲೆ, ರಸ್ತೆಯಲ್ಲಿ ಐದು ಸಣ್ಣ ಕಲ್ಲುಗಳನ್ನ ಇಟ್ಟು ಪೂಜಿಸಲಾಗಿದೆ. ಬಿಜೆಪಿ (BJP) ಕಚೇರಿ ಮುಂಭಾಗದಲ್ಲೇ ಪೂಜೆ ನಡೆದಿರುವುದರಿಂದ ಇದು ವಿರೋಧ ಪಕ್ಷದವರ ಕೃತ್ಯ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ
ಮಸ್ಕಿ (Maski) ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಾದಾಟವಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ (Congress) ಮಧ್ಯೆ ತೀವ್ರ ಪೈಪೋಟಿಯಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಎರಡೂ ಪಕ್ಷದ ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ. ಕಚೇರಿ ಮುಂದಿನ ಬೆಳವಣಿಗೆಗೆ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: 4 ಚುನಾವಣೆಯಲ್ಲೂ ಜಾತಿ ದಂಡ, ಸಿಟಿ ರವಿ ಗೆಲುವಿಗೆ ಹಿಂದುತ್ವ – ಅಭಿವೃದ್ಧಿಯೇ ಮಾನದಂಡ