ಬೆಳಗಾವಿ: ಟಿಕೆಟ್ (Ticket) ಕೇಳಿದಾಗ ಮುಸುಕುಧಾರಿಯೊಬ್ಬ ಐವರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್ (Pondicherry-Mumbai Chalukya Express) ರೈಲಿನಲ್ಲಿ (Train) ನಡೆದಿದೆ.
ಘಟನೆಯಲ್ಲಿ ಝಾನ್ಸಿ (Jhansi) ಮೂಲದ ಟ್ರೇನ್ ಅಟೆಂಡರ್ ದೇವಋಷಿ ವರ್ಮಾ (23) ಸಾವನ್ನಪ್ಪಿದ್ದು, ನಾಲ್ವರು ತೀವ್ರ ಗಾಯಗೊಂಡಿದ್ದಾರೆ. ಬೆಳಗಾವಿಯ (Belagavi) ಖಾನಾಪುರ ತಾಲೂಕಿನ ಲೊಂಡಾ ಬಳಿ ಘಟನೆ ನಡೆದಿದ್ದು, ಟಿಕೆಟ್ ಕೇಳಿದಾಗ ಚೂರಿ ಇರಿದು ಆಗಂತುಕ ಪರಾರಿಯಾಗಿದ್ದಾನೆ. ನಾಲ್ವರು ಪ್ರಯಾಣಿಕರು ಸೇರಿ ಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಪರಿಚಿತ ಮುಸುಕುಧಾರಿಯಿಂದ ಕೃತ್ಯ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ – ಮೇ ತಿಂಗಳಲ್ಲೇ 172 ಕೇಸ್ ದಾಖಲು!
ಕೃತ್ಯ ಎಸಗಿ ಅಪರಿಚಿತ ಮುಸುಕುಧಾರಿ ಪರಾರಿಯಾಗಿದ್ದು, ಟಿ.ಸಿ ಸೇರಿ ನಾಲ್ವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲುಕ್ಯ ರೈಲು ಧಾರವಾಡದಿಂದ ಬೆಳಗಾವಿಯತ್ತ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!