ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಿಗುತ್ತಿಲ್ಲ ಮಾಸ್ಕ್. ಔಷಧಿ ಅಂಗಡಿಯವರನ್ನು ಕೇಳಿದರೆ ‘ಮಾಸ್ಕ್ ನೋ ಆಸ್ಕ್’ ಎನ್ನುತ್ತಿದ್ದಾರೆ.
ಹೌದು. ಜಾಗತಿಕ ಮಟ್ಟದಲ್ಲಿ ತನ್ನ ಕರಾಳ ಹಸ್ತವನ್ನು ಚಾಚುತ್ತಿರುವ ಕೊರೊನಾ ಅಥವಾ ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸುವ ಸದುದ್ದೇಶದಿಂದ ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಆದರೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿರುವ ವಾಣಿಜ್ಯನಗರಿಯಲ್ಲಿ ಮಾತ್ರ ಸಾರ್ವಜನಿಕರಿಗೆ ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಗಳು ಸಿಗುತ್ತಿಲ್ಲ. ಅಲ್ಲದೆ ಕೆಲವೊಂದು ಮೆಡಿಕಲ್ ಶಾಪ್ ಗಳಲ್ಲಿ ಮಾತ್ರ ಮಾಸ್ಕ್ ರೇಟ್ ಗಗನಕ್ಕೆರಿದೆ. ಹತ್ತು ರೂಪಾಯಿಗೆ ಸಿಗುತ್ತಿದ್ದ ಮಾಸ್ಕ್ ಈಗ ನೂರರ ಗಡಿದಾಟಿದೆ. ಅಲ್ಲದೆ ಜನಸಾಮಾನ್ಯರು ಮಾಸ್ಕ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಬಹುತೇಕ ಔಷಧ ಅಂಗಡಿಗಳಲ್ಲಿ ಮಾಸ್ಕ್ ಕೇಳಿದರೆ ಆರ್ಡರ್ ಹಾಕಿದ್ದೇವೆ ಎನ್ನುತ್ತಾರೆ. ಇಲ್ಲವಾದರೆ ಬಟ್ಟೆ ಅಂಗಡಿಗಳಲ್ಲಿ ಹಾಗೂ ನೀವೇ ತಯಾಸಿಕೊಳ್ಳಿ ಎಂಬಂತಹ ಮಾತುಗಳು ಕೂಡ ಔಷಧ ಅಂಗಡಿ ವ್ಯಾಪಾರಸ್ಥರ ಮೂಲದಿಂದ ಬರುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.