– ಕ್ರಿಸ್‌ಮಸ್‌ಗೆ , ಹೊಸ ವರ್ಷಕ್ಕೆ ಯಾವುದೇ ನಿಯಮ ಇಲ್ಲ
– ಜನಸಂದಣಿ ಇರುವಲ್ಲಿ ಮಾಸ್ಕ್ ಹಾಕಲು ಸೂಚನೆ
ಬೆಂಗಳೂರು: ಒಮಿಕ್ರಾನ್ ಉಪತಳಿ JN.1 ತಳಿಯಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇರಬೇಕು, ಕ್ರಮ ಅನುಸರಿಸಬೇಕು. ಮಾಸ್ಕ್ (Mask) ಕಡ್ಡಾಯ ಮಾಡಲ್ಲ. ಕಡ್ಡಾಯ ಮಾಡುವ ಪರಿಸ್ಥಿತಿ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ, ಹೋಂ, ಡಿಸಿಎಂ, ಸಿಎಸ್, ಹಣಕಾಸು, ತಜ್ಞರ ಸಮಿತಿ ಜೊತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಮೂವರು ಕೊರೊನಾದಿಂದ (Corona Virus) ಮೃತರಾಗಿದ್ದಾರೆ. ಆದರೆ ಅವರು ಕೋವಿಡ್ ನಿಂದಲೇ ಸತ್ತಿದ್ದಾರೆ ಅನ್ನೋಕೆ ಆಗಲ್ಲ. ಅವರಿಗೆ ಬೇರೆ ಬೇರೆ ಸಮಸ್ಯೆ ಇತ್ತು. ಅವರಿಗೆ ಕೋವಿಡ್ ಪಾಸಿಟಿವ್ (COVID 19) ಇತ್ತು. ಆರೋಗ್ಯ ಸಚಿವರು ಈಗಾಗಲೇ ಸಭೆ ಮಾಡಿದ್ದಾರೆ ಎಂದರು.
Advertisement
Advertisement
ಇಂದು ತಜ್ಞರ ಸಲಹೆಗಳನ್ನು ಪಡೆದಿದ್ದೇವೆ. ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನೆ. ಆಕ್ಸಿಜನ್, ಬೆಡ್, ಔಷಧಿ ಯಾವುದೂ ಕೊರತೆ ಆಗಬಾರದು. ಬೇರೆ ಕಾಯಿಲೆ ಇರೋರಿಗೂ ಚಿಕಿತ್ಸೆ ಕೊಡಲು ಸೂಚನೆ ನೀಡಲಾಗಿದೆ. ಯಾವುದೇ ಕೊರತೆ ಆಗದಂತೆ ಸೂಚನೆ ನೀಡಿದ್ದೇನೆ. ಲಸಿಕೆ ಅಭಿಯಾನ ಕೂಡಾ ಅಗತ್ಯವಿದ್ದರೆ ಶುರು ಮಾಡಲು ತಿಳಿಸಿದ್ದೇನೆ. ಯಾರು ತೆಗೆದುಕೊಂಡಿಲ್ಲ ಅವರು ಲಸಿಕೆ ಪಡೆಯಬೇಕು ಎಂದರು.
Advertisement
ಈಗ ಬಂದಿರುವುದು JN.1 ಓಮ್ರಿಕಾನ್ ಉಪತಳಿಯಾಗಿದೆ. ಕರ್ನಾಟಕದಲ್ಲಿ 92 ಜನ ಪಾಸಿಟಿವ್ ಇದೆ ಅಂತ ಮಾಹಿತಿ ಇದೆ. ಇದರಲ್ಲಿ ಬೆಂಗಳೂರಿನಲ್ಲಿ 80, ಮೈಸೂರು 5, ಬಳ್ಳಾರಿ 3, ರಾಮನಗರ ಹಾಗೂ ಮಂಡ್ಯದಲ್ಲಿ ತಲಾ 1 ಕೇಸ್ ಇದೆ. 72 ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 7 ಮಂದಿ ಐಸಿಯುನಲ್ಲಿ ಇದ್ದಾರೆ ಎಂದು ತಿಳಿಸಿದರು.
Advertisement
ಶನಿವಾರದಿಂದ ಪ್ರತಿದಿನ 5 ಸಾವಿರ ಟೆಸ್ಟ್ ಪ್ರಾರಂಭ ಮಾಡ್ತೀವಿ. ಕ್ಯಾಬಿನೆಟ್ (Cabinet) ಸಬ್ ಕಮಿಟಿ ರಚನೆ ಮಾಡ್ತೀವಿ. ಯಾರು ಹೆಡ್ ಅಂತ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡ್ತೀವಿ. ಕ್ಯಾಬಿನೆಟ್ ಸಬ್ ಕಮಿಟಿ ನಿರಂತರವಾಗಿ ಕೆಲಸ ಮಾಡಬೇಕು. ತಜ್ಞರ ಜೊತೆ ಸಂಯೋಜನೆಯಾಗಿ ಕೆಲಸ ಮಾಡಬೇಕು. TAC ಯಾವುದೇ ಶಿಫಾರಸು ಮಾಡಿದರು ಅದನ್ನ ಜಾರಿ ಮಾಡಬೇಕು. ಗಡಿ ಜಿಲ್ಲೆಯಲ್ಲಿ ಹೆಚ್ಚು ಟೆಸ್ಟ್ ಮಾಡಬೇಕು. ಜನಸಂದಣಿ ಇರುವಲ್ಲಿ ಮಾಸ್ಕ್ ಹಾಕಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಆಕ್ಸಿಜನ್, ವೆಂಟಿಲೇಟರ್, ಬೆಡ್, ಔಷಧಿ ಎಲ್ಲಾ ಖರೀದಿ ಮಾಡಬೇಕು. ಯಾವೆಲ್ಲ ವಸ್ತು ಬೇಕೋ ಅದನ್ನ ಖರೀದಿ ಮಾಡಿ ಒದಗಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಅಗತ್ಯ ಇದ್ದರೆ ಲಸಿಕೆ ಖರೀದಿ ಮಾಡ್ತೀವಿ. ಕೇಂದ್ರ ಕೊಡೋ ಮುನ್ನ ನಿವೇ ಖರೀದಿ ಮಾಡಿ ಅಂತ ಹೇಳಿದ್ದೇನೆ ಎಂದು ತಿಳಿಸಿದರು.
ಎಲ್ಲಾ ಕಡೆ ಟೆಸ್ಟ್ ಮಾಡಿದ ಮೇಲೆ ಕೇಸ್ ಹೆಚ್ಚಳ ಆಗಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ಟೆಸ್ಟ್ ಗೆ ದರ ನಿಗದಿ ಇನ್ನೂ ಆಗಿಲ್ಲ. ಕ್ಯಾಬಿನೆಟ್ ಸಬ್ ಕಮಿಟಿ ಇದನ್ನ ತೀರ್ಮಾನ ಮಾಡುತ್ತೆ. ಇಂದು ಕ್ಯಾಬಿನೆಟ್ ನಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡ್ತೀವಿ. ಎಷ್ಟು ಹಣ ಬೇಕೋ ಅಷ್ಟು ಹಣ ಕೊರೊನಾ ನಿಯಂತ್ರಣಕ್ಕೆ ಕೊಡ್ತೀವಿ ಎಂದರು.
ಖಾಸಗಿ ಶಾಲೆಗಳು ಮಾಸ್ಕ್ ಕಡ್ಡಾಯ ಮಾಡಿರುವುದು ಒಳ್ಳೆಯದು. ಮುಂದೆ ನಾವು ತಜ್ಞರ ಜತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡ್ತೀವಿ. ಸದ್ಯಕ್ಕೆ ಮಾಸ್ಕ್ ಕಡ್ಡಾಯ ಬೇಡ ಅಂತ ತಾಂತ್ರಿಕ ಸಲಹಾ ಸಮಿತಿ (TAC) ಹೇಳಿದೆ. ಮುಂದೆ TAC ಕೊಡೋ ಸಲಹೆಗಳನ್ನ ಅನುಷ್ಠಾನ ಮಾಡ್ತೀವಿ. ಕೊರೊನಾಗೆ ಡೆಡಿಕೇಟ್ ಆಸ್ಪತ್ರೆಗಳನ್ನ ಸಿದ್ದತೆ ಮಾಡಿಕೊಳ್ಳಲು ಸಲಹೆ ಬಂದಿದೆ. ಕೊರೊನಾಗೆ ಸಪರೇಟ್ ವಾರ್ಡ್ ಇದ್ದರೆ ಚಿಕಿತ್ಸೆಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.