ಹೆಣ್ಣಿಗೆ ಸೀರೆ ಯಾಕೆ ಅಂದಾ! ಸೌಂದರ್ಯ ಪ್ರಿಯೇ ಹೆಣ್ಣಿಗೆ ಸೀರೆ ಎಂದರೆ ಅಚ್ಚುಮೆಚ್ಚು. ಸೀರೆಯುಟ್ಟ ನವಿಲಿನಂತೆ ಕಂಗೊಳಿಸುವ ಹೆಣ್ಣುಮಕ್ಕಳು ವಿವಿಧ ಶೈಲಿಯ, ಬಣ್ಣಗಳ, ಚಿತ್ತಾರದ ಸೀರೆಯನ್ನು ತುಂಬಾ ಇಷ್ಟಪಡುತ್ತಾರೆ. ಸೀರೆಗಳಲ್ಲೇ ನಾವು ಹಲವಾರು ವಿಧಗಳನ್ನ ಕಾಣಬಹುದು. ಕಾಟನ್ ಸೀರೆ, ರೇಷ್ಮೆ ಸೀರೆ, ಬನಾರಸಿ ಸೀರೆ, ಜಾರ್ಜೆಟ್ ಸೀರೆ ಇನ್ನೂ ಹಲವಾರು ವಿಧದ ಸೀರೆಗಳು ನಾರಿಮಣಿಯರನ್ನು ಸುಂದರವಾಗಿ ಕಾಣಿಸುತ್ತದೆ.
ಬರೀ ಸೀರೆ ಬಗ್ಗೆ ಹೇಳಿದ್ರೆ ಸಾಕಾ? ಇಲ್ಲ ಸೀರೆಯ ಲುಕ್ ಬದಲಿಸುವ ಇನ್ನೊಂದು ಬಹಳ ಮುಖ್ಯವಾದ ವಿಷಯ ಇದೆ. ಅದೇನಂದ್ರೆ ಬ್ಲೌಸ್ ಡಿಸೈನ್ಸ್. ಹೌದು, ಸೀರೆಯ ಲುಕ್ ಅನ್ನ ಗ್ರ್ಯಾಂಡ್ ಆಗಿ ಮತ್ತು ಬ್ಯೂಟಿಫುಲ್ ಆಗಿ ಕಾಣುವಂತೆ ಮಾಡುವುದೇ ಬ್ಲೌಸ್ ಡಿಸೈನ್. ಸೀರೆ ಸಿಂಪಲ್ ಆಗಿದ್ರೂ, ಬ್ಲೌಸ್ ಡಿಸೈನ್‌ಯಿಂದ ನಮ್ಮ ಬ್ಯೂಟಿ ಕ್ವೀನ್ಸ್‌ಗಳನ್ನು ಮತ್ತಷ್ಟು ಸೌಂದರ್ಯವತಿಯನ್ನಾಗಿಸುತ್ತದೆ. ಅಬ್ಬಬ್ಬಾ ಈಗಂತೂ ಬ್ಲೌಸ್ ಡಿಸೈನ್‌ಗಳನ್ನ ನೋಡೋಕೆ ಹೋದ್ರೆ ಅಲ್ಲೇ ಕನ್ಫ್ಯೂಸ್ ಆಗಿಬಿಡುತ್ತೇವೆ.
ದಿನಕ್ಕೊಂದು ಸೀರೆಗಳ ಟ್ರೆಂಡ್ ಹೇಗೆ ಬದಲಾಗುತ್ತದೆಯೋ ಅದೇ ರೀತಿ ಡಿಸೈನರ್ಸ್ ಕೂಡ ತಾ ಮುಂದು ನಾ ಮುಂದು ಅಂತ ಹೊಸ ಹೊಸ ಡಿಸೈನ್ಸ್ ಗಳ ಮೂಲಕ ಅವರ ಕೈಚಳಕ ತೋರಿಸುತ್ತಿದ್ದಾರೆ. ದಿನೇ ದಿನೇ ಫ್ಯಾಶನ್ ವರ್ಲ್ಡ್‌ನಲ್ಲಿ ಟ್ರೆಂಡ್ ಚೇಂಜ್ ಆಗುತ್ತಿದ್ದು, ಇದೀಗ ಮಸಾಬ ಬ್ಲೌಸ್ ಡಿಸೈನ್ಸ್ ಸೆಲೆಬ್ರಿಟಿಗಳ ಮನ ಗೆದ್ದಿದೆ. ಮಾಡರ್ನ್ ಹಾಗೂ ಕಾಸಿಕ್ ವೇರ್‌ಗೂ ಮ್ಯಾಚ್ ಆಗುವ ಈ ಡಿಸೈನ್ ಈಗ ಸಖತ್ ಟ್ರೆಂಡ್ ನಲ್ಲಿದೆ.
ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್‌ವುಡ್ ವರೆಗಿನ ತಾರೆಯರು ಈ ಡಿಸೈನ್‌ಗೆ ಮಾರುಹೋಗಿದ್ದಾರೆ. ಸಿಂಪಲ್ ಆಗಿದ್ರುನೂ ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿ ಕಾಣಿಸುತ್ತದೆ. ಈಗ ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಈ ಒಂದು ಪ್ಯಾಟ್ರನ್ ಬ್ಲೌಸ್‌ನಲ್ಲಿ ಮಿಂಚುತ್ತಿರುತ್ತಾರೆ. ಹುಡುಗಿರಂತೂ ಕಾಲೇಜ್ ಡೇ, ಮದುವೆ, ಫ್ರೆಶರ್ ಪಾರ್ಟಿ ಅಂತ ಸೀರೆ ತೆಗೆದುಕೊಳ್ಳುವಾಗ ಟ್ರೆಂಡಿಂಗ್ ಡಿಸೈನ್‌ಗಳತ್ತ ನೋಡ್ತಾ ಇರ್ತಾರೆ.
ಮಸಾಬ ಬ್ಲೌಸ್‌ನ ವಿಶೇಷತೆಗಳು:
ಸೀರೆ ಫ್ಯಾಬ್ರಿಕ್ ಆಗಿರಲಿ, ಕಾಟನ್ ಆಗಿರಲಿ, ರೇಷ್ಮೆ ಅಥವಾ ಜಾರ್ಜೆಟ್ ಆಗಿರಲಿ ಎಲ್ಲಾ ಬಗೆಯ ಸೀರೆಗೆ ಈ ಬ್ಲೌಸ್ ಡಿಸೈನ್ ಸೂಟ್ ಆಗುತ್ತೆ ಎಂಬುವುದೇ ಇದರ ಮತ್ತೊಂದು ವಿಶೇಷತೆ. ನೀವು ಇತ್ತೀಚೆಗೆ ಬಿಗ್‌ಬಾಸ್‌ನಲ್ಲಿ ಖ್ಯಾತಿಯ ಮೋಕ್ಷಿತ ಪೈ ಇತ್ತೀಚಿಗಷ್ಟೇ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದಾಗ ಇದೇ ಮಸಾಬ ಡಿಸೈನ್ ಬ್ಲೌಸ್ ನಲ್ಲಿ ಮಿಂಚಿದರು. ಅಲ್ಲದೆ ಗಿಣಿರಾಮ ಖ್ಯಾತಿಯ ಕಾವೇರಿ ಬಾಗಲಕೋಟೆ ಸಹ ಇದೆ ಬ್ಲೌಸ್ ಡಿಸೈನ್‌ನಲ್ಲಿ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದರು.
ನೀವು ಈ ಡಿಸೈನ್ ಬ್ಲೌಸ್ ಸ್ಟಿಚ್ ಮಾಡಿ ಗ್ರ್ಯಾಂಡ್ ಸೀರೆಗೆ ಹಾಕಬಹುದು. ಸಿಂಪಲ್ ಸೀರೆಗೂ ಬಳಸಬಹುದು. ಈ ಲುಕ್ ಸಖತ್ ಸ್ಟೈಲಿಷ್ ಲುಕ್ ನೀಡುತ್ತದೆ. ಅಲ್ಲದೆ ನಿಮಗೆ ಟ್ರೆಂಡಿ ಲುಕ್ ಕೂಡಾ ನೀಡುತ್ತದೆ. ಮಾಡ್ರನ್ ಲುಕ್ ಕೊಟ್ಟ ಮಸಾಬ ಬ್ಲೌಸ್ ಧರಿಸಿ ನ್ಯಾಷನಲ್ ಕ್ರಷ್ ರಶ್ಮಿಕ ಮಂದಣ್ಣ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಅಲ್ಲದೆ ಬಾಲಿವುಡ್‌ನ ನಟಿ ಶಾರ್ವರಿ ಸಹ ಹಳದಿ ಬಣ್ಣದ ಸೀರೆ ಉಟ್ಟು, ಮಸಾಬ ಬ್ಲೌಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಟಾಲಿವುಡ್‌ನ ಸುಂದ್ರಿ, ಮಿಲ್ಕಿ ಬ್ಯೂಟಿ ಎಂದೇ ಹೆಸರುವಾಸಿಯಾಗಿರುವ ತಮನ್ನಾ ಭಾಟಿಯಾ ಮಾಡ್ರನ್ ಡ್ರೆಸ್ಸಿಗೆ ಹಸಿರು ಬಣ್ಣದ ಮಸಾಬ ಬ್ಲೌಸ್ ಧರಿಸಿದ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.
ಸ್ಲೀವ್‌ಲೆಸ್ ಅಥವಾ ಫುಲ್‌ಸ್ಲಿವ್ ರೀತಿಯಲ್ಲೂ ಇದನ್ನೂ ಧರಿಸಬಹುದು. ಹೀಗಾಗಿ ಸ್ಲೀವ್‌ಲೆಸ್ ಹಾಕುವುದೇ ಇಲ್ಲ ಎನ್ನುವವರು ಕೂಡ ಈ ಬ್ಲೌಸ್ ಡಿಸೈನ್ ಟ್ರೈ ಮಾಡಬಹುದು. ಟ್ರೆಡಿಷನಲ್ ಮತ್ತು ಮಾಡ್ರನ್ ಸೀರೆಗಳಿಗೆ ಮ್ಯಾಚ್ ಆಗುವ ಈ ಬ್ಲೌಸ್‌ನಲ್ಲಿ ನೀವೂ ಕೂಡಾ ಸೆಲೆಬ್ರಿಟಿಗಳ ರೀತಿಯಲ್ಲಿ ಪಾರ್ಟಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಮಿಂಚಬಹುದು.
ನೀವು ಧರಿಸುವ ಸೀರೆ, ಹೇರ್ ಸ್ಟೈಲ್, ಅಲಂಕಾರದ ಪ್ರಕಾರ ನಿಮ್ಮ ಲುಕ್ ಬದಲಾಗುವುದು. ಮಸಾಬ ಬ್ಲೌಸ್‌ನ ಬ್ಯಾಕ್ ಡಿಸೈನ್ ನಿಮಗೆ ಇಷ್ಟವಾಗುವಂತೆ ಸ್ಟಿಚ್ ಮಾಡಿಸಬಹುದು. ಅಲ್ಲದೆ ಇದು ಬ್ಯಾಕ್ ಬಟನ್ ಬ್ಲೌಸ್ ಆಗಿದೆ. ಇನ್ನು ಬೆನ್ನಿನ ಭಾಗಕ್ಕೆ ಥ್ರೆಡ್ ಅನ್ನು ಪ್ಲೈನ್ ಆಗಿ ಇಡಬಹುದು. ಇಲ್ಲದಿದ್ದರೆ ಆ ದಾರದ ಮೂಲಕವೇ ಮತ್ತಷ್ಟು ಟ್ರೆಂಡಿ ಆಗಿ ಕಾಣುವಂತೆ ವಿನ್ಯಾಸ ಮಾಡಬಹುದು.
ಈ ವಿನ್ಯಾಸಕ್ಕೆ ಸೀರೆಯ ಸೆರಗು ಸಿಂಗಲ್ ಪಿನ್ ರೀತಿಯಲ್ಲಿ ಜೋತು ಬಿಟ್ಟರೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ. ಈ ಮಸಾಬ ಬ್ಲೌಸ್ ಡಿಸೈನ್ ಅನ್ನು ಕೇವಲ ಸೀರೆಗಳಿಗೆ ಮಾತ್ರ ಧರಿಸದೆ, ಲಂಗ ದಾವಣಿ ಅಥವಾ ಸ್ಕರ್ಟ್ ಆ್ಯಂಡ್ ಬ್ಲೌಸ್ ರೀತಿಯಲ್ಲಿ ಧರಿಸಿದರೆ ಟ್ರೆಂಡಿ ಹಾಗೂ ಬೋಲ್ಡ್ ಆಗಿ ಕಾಣಿಸುತ್ತೀರಾ. ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ಈ ವಿನ್ಯಾಸದ ಬ್ಲೌಸ್‌ಗಳನ್ನ ಧರಿಸಿ ಟ್ರೆಂಡಿ ಹಾಗೂ ಡಿಫ್ರೆಂಟ್ ಆಗಿ ಕಾಣಿಸಿಕೊಳ್ಳಿ.