ಬೆಂಗಳೂರು: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ನಿಯಮಗಳನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿದ್ದು, ಈ ಕುರಿತು ಕನ್ನಡದಲ್ಲಿ ಪುಸ್ತಕ ಬರೆದಿದ್ದ ಬೆಂಗಳೂರಿನ ಮಾಜಿ ಅಂಪೈರ್ ವಿನಾಯಕ ಕುಲಕರ್ಣಿ ಅವರ ಪುಸ್ತಕವನ್ನು ಇಂಗ್ಲೆಂಡಿನ ಮಲೊಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.
1998ರಲ್ಲಿ ಕ್ರಿಕೆಟ್ ನಿಯಮಗಳನ್ನು ಮೊದಲ ಬಾರಿಗೆ ಕನ್ನಡದಲ್ಲಿ ಬರೆದ ವಿನಯ್ ಕುಲಕರ್ಣಿ ಅವರು `ಕ್ರಿಕೆಟ್ ನಿಯಮಗಳು’ ಅನುವಾದ ಪುಸ್ತಕವನ್ನು ಪ್ರಕಟಿಸಿದ್ದರು. ಇದಾದ ಬಳಿಕ ಪರಿಷ್ಕೃತ ನಿಯಮಗಳ ಪುಸ್ತಕ 2017 ರಲ್ಲಿ ಕ್ರಿಕೆಟ್ ನಿಯಮಗಳು ಎಂಬ ಹೆಸರಿನಲ್ಲಿ ಪ್ರಕಟಗೊಂಡಿತ್ತು. ಈ ಪುಸ್ತಕವನ್ನು ಮಲೊರ್ಬೊನ್ ಕ್ರಿಕೆಟ್ ಕ್ಲಬ್ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಈ ಮೂಲಕ ಕನ್ನಡ ಭಾಷೆಯ ಕೀರ್ತಿ ವಿಶ್ವಮಟ್ಟದಲ್ಲಿ ಹೆಚ್ಚಳವಾಗಿದೆ. ಈ ಹಿಂದೆ ಎಂಸಿಸಿ ಹಿಂದಿ ಗುಜರಾತಿ ಭಾಷೆಯಲ್ಲಿ ನಿಯಮಗಳನ್ನ ಪ್ರಕಟಿಸಿದನ್ನು ಇಲ್ಲಿ ನೆನಪಿಸಬಹುದಾಗಿದೆ.
Advertisement
Advertisement
ಪುಸ್ತಕ 124 ಪುಟಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಕ್ರಿಕೆಟ್ ಬೆಳವಣಿಗೆ ಪ್ರಮುಖ ಇಸವಿಗಳು, ಆಟಗಾರರು, ಅಂಪೈರ್, ಸ್ಕೋರ್ ಗಳು, ಆಟದ ಮೈದಾನ, ವಿರಾಮ, ಇನ್ನಿಂಗ್ಸ್, ಓವರ್, ಟೈಮ್ ಔಟ್, ಆಟಗಾರರ ನಡವಳಿಕೆ, ನಿಯಮಬಾಹಿರ ಆಟ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ವಿವರಣೆ ನೀಡಲಾಗಿದೆ.
Advertisement
ತಂತ್ರಜ್ಞಾನದಿಂದ ಅಂಪೈರ್ ಮೇಲಿನ ಒತ್ತಡ ಹೆಚ್ಚಳವಾಗಿದ್ದು, ಟೆಲಿವಿಷನ್ ಅಲ್ಟ್ರಾ ಸ್ಲೋ ಮೋಷನ್ ಮೂಲಕ ಅಂಪೈರ್ ಗಳ ಸಣ್ಣ ತಪ್ಪು ದೊಡ್ಡದಾಗಿ ಕಾಣುತ್ತದೆ. ಅಲ್ಲದೇ ಅಂಪೈರ್ ಅಂತರಾಷ್ಟ್ರೀಯ ದರ್ಜೆಗೇರಲು ಹಲವು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಅಂಪೈರ್ ತರಬೇತಿ ಅವಧಿಯಲ್ಲಿ ಕ್ರಿಕೆಟ್ ನಿಯಮಗಳು ಸುಲಭವಾಗಿ ಆರ್ಥೈಸಿಕೊಳ್ಳಲು ನಿಯಮಗಳನ್ನು ಪ್ರಕಟಿಸಲಾಗಿದೆ ಎಂದು ವಿನಾಯಕ ಕುಲಕರ್ಣಿ ಅವರು ತಿಳಿಸಿದ್ದಾರೆ.
Advertisement
ಅಂದಹಾಗೇ ಬಾಗಲಕೋಟೆಯಲ್ಲಿ ಮೂಲದ ವಿನಾಯಕ ಕುಲಕರ್ಣಿ ಅವರು 1999 ರಿಂದ 2000 ಅವಧಿಯಲ್ಲಿ 2 ಏಕದಿನ ಪಂದ್ಯಗಳಿಗೆ ಫೀಲ್ಡ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಇವರನ್ನು ಅಂಪೈರ್ ಕೋಚ್ ಆಗಿ ಬಿಸಿಸಿಐ ಆಯ್ಕೆ ಮಾಡಿತ್ತು. ಉಳಿದಂತೆ 60 ರಣಜಿ ಪಂದ್ಯಗಳಲ್ಲಿ ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಭಾರತದಲ್ಲಿ ಅಂಪೈರ್ ಗುಣಮಟ್ಟ ಸುಧಾರಿಸಲು ಬಿಸಿಸಿಐ ನಾಗಪುರ ಅಂಪೈರ್‍ಗಳ ಅಕಾಡೆಮಿ ಆರಂಭಿಸಿತ್ತು. ಈ ಆಕಾಡೆಮಿಯಲ್ಲಿ ವಿನಾಯಕ ಕುಲಕರ್ಣಿ ಅವರು ಮೊದಲ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಕನ್ನಡಲ್ಲಿರುವ ಕ್ರಿಕೆಟ್ ನಿಮಯಮದ ಪಿಡಿಎಫ್ ಪ್ರತಿಯನ್ನು ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: www.lords.org
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv