ನವದೆಹಲಿ:2016-17ರ ಅವಧಿಯಲ್ಲಿ ದೇಶದಲ್ಲಿ ಮಾರುತಿ ಕಂಪೆನಿಯ ಕಾರುಗಳು ಅತಿ ಹೆಚ್ಚು ಮಾರಾಟವಾಗಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಅತಿಹೆಚ್ಚು ಮಾರಾಟದವಾದ ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿ ಕಂಪೆನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.
ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ವರದಿಯನ್ನು ಬಿಡುಗಡೆ ಮಾಡಿದೆ. 2015-16 ಅವಧಿಯಲ್ಲಿ ಮಾರಾಟವಾದ ಅತಿ ಹೆಚ್ಚು ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿಯ ಕಂಪೆನಿಯ 6 ಕಾರುಗಳು ಸ್ಥಾನ ಪಡೆದಿದ್ದರೆ ಈ ಬಾರಿ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.
Advertisement
2016-17ರಲ್ಲಿ ಭಾರತದಲ್ಲಿ ಒಟ್ಟು 30,46,727 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಅವಧಿಯಲ್ಲಿ 27,89,208 ಕಾರುಗಳು ಮಾರಾಟವಾಗಿದ್ದು, ಶೇ.9.23 ಪ್ರಗತಿ ದರ ಸಾಧಿಸಿದೆ.
Advertisement
ಒಟ್ಟು ಮಾರಾಟವಾದ ಕಾರುಗಳು ಪೈಕಿ ಶೇ.35ರಷ್ಟು ಪಾಲನ್ನು ಮಾರುತಿ ಕಂಪೆನಿಯ ಕಾರುಗಳು ಪಡೆದುಕೊಂಡಿದ್ದು, ಟ್ಟು 14,43,641 ಕಾರುಗಳು ಮಾರಾಟವಾಗಿದೆ.
Advertisement
ಯಾವ ಕಾರು ಎಷ್ಟು ಮಾರಾಟವಾಗಿದೆ?
#1 ಮಾರುತಿ ಆಲ್ಟೋ
Advertisement
ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 2,41,635 ಅಲ್ಟೋ ಕಾರುಗಳು ಮಾರಾಟವಾಗಿದೆ. ಸತತ 13 ವರ್ಷಗಳಿಂದ ಈ ಪಟ್ಟಿಯಲ್ಲಿ ಅಲ್ಟೋ ನಂಬರ್ ಒನ್ ಸ್ಥಾನಗಳಿಸಿದರೂ ಈ ಹಿಂದಿನ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.8.27 ಕುಸಿತ ಕಂಡಿದೆ. ಈ ಹಿಂದಿನ ಹಣಕಾಸು ಅವಧಿಯಲ್ಲಿ 2,63,422 ಕಾರುಗಳು ಮಾರಾಟಗೊಂಡಿತ್ತು.
#2 ವ್ಯಾಗನ್ ಆರ್:
ಎರಡನೇ ಸ್ಥಾನದಲ್ಲಿ ಮಾರುತಿಯ ವ್ಯಾಗನ್ ಆರ್ ಕಾರು ಇದ್ದು, 1,72,346 ಕಾರುಗಳು ಮಾರಾಟವಾಗಿವೆ. 2015-16ರಲ್ಲಿ 1,69,555 ವಾಗನ್ ಆರ್ ಮಾರಾಟ ಕಂಡಿತ್ತು.
#3 ಸ್ವಿಫ್ಟ್ ಡಿಸೈರ್:
ಕಳೆದ ವರ್ಷ 1,67,266ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,939 ಸ್ವಿಫ್ಟ್ ಡಿಸೈರ್ ಮಾರಾಟವಾಗಿತ್ತು.
#4 ಸ್ವಿಫ್ಟ್:
1,66,885 ಸ್ವಿಫ್ಟ್ ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,043 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್ 3 ಸ್ಥಾನವನ್ನು ಪಡೆದುಕೊಂಡಿತ್ತು.
#5. ಗ್ರಾಂಡ್ ಐ10:
ಹುಂಡೈ ಕಂಪೆನಿಯ ಐ10 5ನೇ ಸ್ಥಾನ ಪಡೆದುಕೊಂಡಿದೆ. ಹಣಕಾಸು ವರ್ಷದಲ್ಲಿ 1,46,228 ಕಾರುಗಳು ಮಾರಾಟವಾಗಿವೆ.
#6 ಎಲೈಟ್ ಐ20:
ಹುಂಡೈ ಎಲೈಟ್ ಐ20ಗೆ 6ನೇ ಸ್ಥಾನ ಸಿಕ್ಕಿದ್ದು, 1,26,304 ಕಾರುಗಳು ಮಾರಾಟ ಕಂಡಿದೆ.
#7 ಬಲೆನೊ:
ಮಾರುತಿ ಸುಜುಕಿ ಕಂಪೆನಿ ಬಲೆನೊ 1,20,804 ಕಾರುಗಳು ಮಾರಾಟವಾಗಿದೆ.
#8 ಕ್ವಿಡ್:
ರೆನಾಲ್ಟ್ ಕಂಪೆನಿಯ ಕ್ವಿಡ್ 8ನೇ ಸ್ಥಾನಗಳಿಸಿದ್ದು, 1,09,341 ಕಾರುಗಳು ಮಾರಾಟ ಕಂಡಿವೆ.
#9 ವಿಟಾರಾ ಬ್ರೆಜಾ:
ಮಾರುತಿ ಕಂಪೆನಿಯ ವಿಟಾರಾ ಬ್ರೆಜಾ 1,08,640 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ.
#10 ಸೆಲರಿಯೋ
ಮಾರುತಿಯ ಸೆಲರಿಯೋ 2016-17ರ ಹಣಕಾಸು ವರ್ಷದಲ್ಲಿ ಒಟ್ಟು 97,361 ಮಾರಾಟ ಕಂಡಿದೆ.