ನವದೆಹಲಿ: ದೇಶದ ನಂಬರ್ ಒನ್ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ತನ್ನ ನೂತನ ಮಾದರಿಯ ಸ್ವಿಫ್ಟ್ ಹಾಗೂ ಡಿಸೈರ್ ನ ಒಟ್ಟು 1,279 ಕಾರುಗಳನ್ನು ಹಿಂಪಡೆದುಕೊಂಡಿದೆ.
ನೂತನ ಸ್ವಿಫ್ಟ್ ಹಾಗೂ ಡಿಸೈರ್ ಕಾರುಗಳಲ್ಲಿ ಏರ್ ಬ್ಯಾಗ್ ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ಕಂಪೆನಿ ತನ್ನ ವೆಬ್‍ಸೈಟ್ ನಲ್ಲಿ ತಿಳಿಸಿದೆ.
Advertisement
ನೂತನ ಮಾದರಿಯ ಸ್ವಿಫ್ಟ್ ಮಾದರಿಯ 566 ಹಾಗೂ ಡಿಸೈರ್ ಮಾದರಿಯ 713 ವಾಹನಗಳನ್ನು ಹಿಂಪಡೆದುಕೊಂಡಿದೆ. ಅಲ್ಲದೇ ಇದೇ ವರ್ಷ ಮೇ ತಿಂಗಳ 7 ರಿಂದ ಜುಲೈ ತಿಂಗಳ 5 ನೇ ತಾರೀಖಿನವರೆಗೂ ಮಾರಾಟವಾದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ವಾಹನಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?
Advertisement
Advertisement
ಇಂದಿನಿಂದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ಗ್ರಾಹಕರು ಮಾರುತಿ ಸುಜುಕಿಯ ಎಲ್ಲಾ ಡೀಲರ್ ಗಳ ಬಳಿ ತಮ್ಮ ವಾಹನಗಳನ್ನು ನೀಡಿ ತಾಂತ್ರಿಕ ದೋಷಗಳನ್ನು ಉಚಿತವಾಗಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
Advertisement
ಈ ಹಿಂದೆ ಮಾರುತಿ ಕಂಪೆನಿ ತನ್ನ ನೂತನ ಸ್ವಿಫ್ಟ್ ಹಾಗೂ ಬಲೆನೊ ಮಾದರಿಗಳಲ್ಲಿ ಬ್ರೇಕ್ ಗೆ ಸಂಬಂಧಿತ ತಾಂತ್ರಿಕ ದೋಷದಿಂದಾಗಿ ಸುಮಾರು 52,686 ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿ ಕೊಟ್ಟಿತ್ತು. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಕಂಪೆನಿಯು ಉತ್ಪಾದನಾ ವೇಳೆ ಉಂಟಾದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಯೋಜನೆಯನ್ನು 2012ರ ಜುಲೈ ತಿಂಗಳಿನಿಂದ ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಕಂಪೆನಿಯು ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿಕೊಡುತ್ತಾ ಬಂದಿದೆ.