ಮುಂಬೈ: ಏಪ್ರಿಲ್ 1 ರಿಂದ ಮಾರುತಿ ಸುಝುಕಿ (Maruti Suzuki) ಕಂಪನಿ ಕಾರುಗಳ ಬೆಲೆ ದುಬಾರಿ ಆಗಲಿದೆ.
ದೇಶದ ಅತಿದೊಡ್ಡ ಪ್ರಯಾಣಿಕ ವಾಹನ (ಪಿವಿ) ತಯಾರಕ ಮಾರುತಿ ಸುಜುಕಿ ಇಂಡಿಯಾ, ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಏಪ್ರಿಲ್ 2025 ರಿಂದ ತನ್ನ ಕಾರುಗಳ ಬೆಲೆಯನ್ನು ಶೇ. 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?
ಮಾಡೆಲ್ ಅವಲಂಬಿಸಿ ಬೆಲೆ ಏರಿಕೆ ಬದಲಾಗುತ್ತದೆ. ಕಂಪನಿಯು ಮಾಡೆಲ್‌ವಾರು ಬೆಲೆ ಏರಿಕೆಯನ್ನು ನಿರ್ದಿಷ್ಟಪಡಿಸಿಲ್ಲ. ಮಾರುತಿ ತನ್ನ ಹೊಸ ಕಾರುಗಳನ್ನು ನೆಕ್ಸಾ ಮತ್ತು ಅರೆನಾ ಮಳಿಗೆಗಳ ಮೂಲಕ ಮಾರಾಟ ಮಾಡುತ್ತದೆ.
ನೆಕ್ಸಾ ಮಳಿಗೆಗಳು ಇಗ್ನಿಸ್, ಬಲೆನೊ, ಸಿಯಾಜ್, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಎಕ್ಸ್‌ಎಲ್ 6 ಮತ್ತು ಇನ್ವಿಕ್ಟೊದಂತಹ ಮಾಡೆಲ್‌ಗಳನ್ನು ನೀಡುತ್ತವೆ. ಅರೆನಾ ಮಳಿಗೆಗಳ ಮೂಲಕ ಮಾರಾಟವಾಗುವ ಮಾಡೆಲ್‌ಗಳಲ್ಲಿ ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲಿಯೊ, ಈಕೊ, ವ್ಯಾಗನ್‌ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ಸೇರಿವೆ. ಇದನ್ನೂ ಓದಿ: ಏಪ್ರಿಲ್ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್ – ಆರಂಭಿಕ ಬೆಲೆ ಎಷ್ಟು?
ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಇದೇ ಏಪ್ರಿಲ್‌ನಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ. ಬೆಲೆ ಹೆಚ್ಚಳವು 4% ವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಮಾರುತಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಮೂಲ ಸಲಕರಣೆ ತಯಾರಕರು (OEM ಗಳು) ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಬಾರಿ ಕಾರು ಬೆಲೆಗಳನ್ನು ಹೆಚ್ಚಿಸುತ್ತಾರೆ.