ನವದೆಹಲಿ: ಎನ್‍ಸಿಎಪಿ (ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) ಸಂಸ್ಥೆ ನಡೆಸುವ ವಾಹನಗಳ ಗುಣಮಟ್ಟ ಪರೀಕ್ಷೆಯಲ್ಲಿ ಮಾರುತಿ ಕಂಪೆನಿಯ ವಿಟಾರಾ ಬ್ರೇಝಾ ಎಸ್‍ಯುವಿ ಕಾರ್ 4 ಸ್ಟಾರ್ ಪಡೆದುಕೊಂಡಿದೆ.
ಭಾರತದಾದ್ಯಂತ ಅತ್ಯಧಿಕ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಕಂಪೆನಿಯ ವಿಟಾರಾ ಬ್ರೇಝಾ ಎಸ್‍ಯುವಿ ವಾಹನವು ಉತ್ತಮ ಗುಣಮಟ್ಟ ಹಗೂ ಭದ್ರತೆಯಿಂದ ಕೂಡಿದೆ ಎಂದು ಎನ್‍ಸಿಎಪಿ ಪರೀಕ್ಷೆ ನಡೆಸಿ 4 ಸ್ಟಾರ್ ಗಳನ್ನು ನೀಡಿದೆ.
Advertisement
ಎನ್‍ಸಿಎಪಿ ಜರ್ಮನಿಯಲ್ಲಿ ನಡೆಸಿದ ಪರಿಕ್ಷಾರ್ಥದಲ್ಲಿ ವಿಟಾರಾ ಬ್ರೇಝಾ ಕಾರನ್ನು ಗಂಟೆಗೆ 64 ಕಿ.ಮೀ ವೇಗದಲ್ಲಿ ಮುಂಭಾಗದ ಮೂಲಕ ಡಿಕ್ಕಿ ಹೊಡೆಸಿದೆ. ಈ ವೇಳೆ ಮುಂಭಾಸಗದ ಚಾಲಕ ಹಾಗೂ ಸಹ ಪ್ರಯಾಣಿಕನ ಪ್ರತಿರೂಪ ಬೊಂಬೆಗಳಲ್ಲಿ ಅಳವಡಿಸಿರುವ ಸೆನ್ಸರ್ ಗಳ ಪೈಕಿ 4 ಸ್ಟಾರ್ ದೊರೆತಿದೆ. ಅಲ್ಲದೇ ಹಿಂಬದಿ ಸೀಟಿನ ಮಗುವಿನ ಬೊಂಬೆಗೆ ಅಳವಡಿಸಿದ್ದ ಸೆನ್ಸರ್ ವರದಿಯ ಪ್ರಕಾರ 2 ಸ್ಟಾರ್ ಗಳು ಸಿಕ್ಕಿವೆ.
Advertisement
ವಿಟಾರಾ ಬ್ರೇಝಾ ವಾಹನವು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದೆ. ಅಲ್ಲದೇ ಪ್ರತಿ ಸಂಸ್ಥೆಯ ಕಾರುಗಳನ್ನು ಎನ್‍ಸಿಎಪಿ ಪರೀಕ್ಷೆಗೆ ಒಳಪಡಿಸಿ, ಕಾರುಗಳು ಎಷ್ಟರ ಮಟ್ಟಿಗೆ ವಾಹನ ಡ್ರೈವರ್ ಮತ್ತು ಪ್ರಯಾಣಿಕರನ್ನು ರಕ್ಷಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಒದಗಿಸುತ್ತದೆ. ಈ ಮಾಹಿತಿಗಳ ಪ್ರಕಾರ ಯಾವ ಯಾವ ಸ್ಟಾರ್ ಗಳಿಗೆ ಯಾವ ಯಾವ ರೀತಿ ಮಾನದಂಡಗಳಿವೆ ಎಂಬುದನ್ನು ತಿಳಿದು ಕೊಳ್ಳಲು ಸಹಾಯಕವಾಗುತ್ತದೆ.
Advertisement
Advertisement
ಭಾರತದಲ್ಲಿ ಎಸ್‍ಯುವಿ ವಿಭಾಗದಲ್ಲಿ ಸದ್ದು ಮಾಡುತ್ತಿರುವ ವಿಟಾರಾ ಬ್ರೇಝಾ ಪೆಟ್ರೋಲ್ ಮಾದರಿಗಳಾದ ಎಲ್‍ಡಿಐಗೆ 7,76,720 ರೂಪಾಯಿ, ವಿಡಿಐ ಮಾದರಿಗೆ 8,45,349 ರೂಪಾಯಿ ಹಾಗೂ ವಿಡಿಐ ಎಎಂಟಿಗೆ 8,95,349 ಎಕ್ಸ್ ಶೋರೂಂ ಬೆಲೆಯಾಗಿದೆ. ಅಲ್ಲದೇ ಡಿಸೇಲ್ ಮಾದರಿಯ ಜೆಡ್‍ಡಿಐ ಮಾದರಿಗೆ 9,10,202 ರೂಪಾಯಿ, ಜೆಡ್‍ಡಿಐ ಎಎಂಟಿಗೆ 9,60,202 ರೂಪಾಯಿ, ಜೆಡ್‍ಡಿಐ+ಗೆ 10,05,378 ರೂಪಾಯಿ ಹಾಗೂ ಜೆಡ್‍ಡಿಐ+ ಎಎಂಟಿಗೆ 10,55,378 ರೂಪಾಯಿ ಆಗಲಿದೆ.
ಏನಿದು ಕ್ರ್ಯಾಶ್ ಟೆಸ್ಟಿಂಗ್?
ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‍ಸಿಎಪಿ, ಕಾರುಗಳಲ್ಲಿನ ಸುರಕ್ಷತೆಗೆ ರೇಟಿಂಗ್ ನೀಡುತ್ತದೆ. ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಪಾಯಕಾರಿ ಕಾರು ಎಂದು ಕರೆಯಲಾಗುತ್ತದೆ.
ಎಷ್ಟು ಸ್ಟಾರ್ಸ್ ಗೆ ಎಷ್ಟು ಸೇಫ್ಟಿ?
* ಕೇವಲ ಅಪಘಾತದ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತದೆ.
** ಅಪಘಾತದ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಆದರೆ ಅಪಘಾತವನ್ನು ತಪ್ಪಿಸುವ ಯಾವುದೇ ತಂತ್ರಜ್ಞಾನ ಇಲ್ಲ.
*** ಪ್ರಯಾಣಿಕರಿಗೆ ಒಂದು ಮಟ್ಟಿಗೆ ಸುರಕ್ಷಿತ ವಾಹನ ಆದರೆ ಯಾವುದೇ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡುವ ತಂತ್ರಜ್ಞಾನ ಹೊಂದಿಲ್ಲ.
**** ಅಪಘಾತದ ತೀವ್ರತೆಯಿಂದಾಗುವ ಅವಘಡಗಳನ್ನು ತಪ್ಪಿಸುತ್ತದೆ. ಏರ್ ಬ್ಯಾಗ್ ಹಾಗೂ ಇನ್ನುಳಿದ ಸುರಕ್ಷತೆಯನ್ನು ವಾಹನ ಒಳಗೊಂಡಿದೆ.
***** ಅಪಘಾತದ ಎಲ್ಲಾ ಹಂತಗಳಲ್ಲು ಸುಭದ್ರವಾಗಿದ್ದು, ಎರ್ ಬ್ಯಾಗ್, ಎಬಿಎಸ್ ಸೇರಿದಂತೆ ಮುಂತಾದ ಅಡ್ವಾನ್ಸ್ ಟೆಕ್ನಾಲಜಿಗಳನ್ನು ಬಳಸಿರುವುದರಿಂದ ಅಪಘಾತದ ತೀವ್ರತೆ ತೀರಾ ಕಡಿಮೆ ಎನ್ನಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv