LatestAutomobileNational

ಭಾರತದಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದ ಮಾರುತಿ ಸುಜುಕಿ

ನವದೆಹಲಿ: ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ 37 ವರ್ಷದಲ್ಲಿ ಒಟ್ಟು 2 ಕೋಟಿ ಕಾರುಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿ ಮೈಲಿಗಲ್ಲನ್ನು ನಿರ್ಮಿಸಿದೆ.

ಭಾರತ ಮತ್ತು ಜಪಾನ್ ಕಂಪನಿ ಮೊದಲ 29 ವರ್ಷದಲ್ಲಿ 1 ಕೋಟಿ ಕಾರುಗಳನ್ನು ಮಾರಾಟ ಮಾಡಿದ್ದರೆ ಕಳೆದ 8 ವರ್ಷದಲ್ಲಿ ಒಟ್ಟು 1 ಕೋಟಿ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಒಟ್ಟು 2 ಕೋಟಿ ಕಾರುಗಳನ್ನು ಮಾರಾಟ ಮಾಡಿದ ದೇಶದ ಏಕೈಕ ಕಂಪನಿಯಾಗಿ ಮಾರುತಿ ಹೊರಹೊಮ್ಮಿದೆ.

ಭಾರತದಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದ ಮಾರುತಿ ಸುಜುಕಿ

1983ರ ಡಿಸೆಂಬರ್ 14 ರಂದು ಮಾರುತಿ 800 ಕಾರುಗಳನ್ನು ಮಾರಾಟ ಮಾಡುವ ಮೂಲಕ ಈ ಕ್ಷೇತ್ರಕ್ಕೆ ಕಾಲಿಟ್ಟ ಕಂಪನಿ 2005-06 ರಲ್ಲಿ ಕಂಪನಿ ಒಟ್ಟು 50 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಇದನ್ನೂ ಓದಿ: ಇನ್ನು ಮುಂದೆ ಜಿಪ್ಸಿ ಕಾರು ರಸ್ತೆಗೆ ಇಳಿಯಲ್ಲ!

ಯಾವ ವರ್ಷ ಎಷ್ಟು ಕಾರು ಮಾರಾಟ?
1994-95 – 10 ಲಕ್ಷ
2005-06 – 50 ಲಕ್ಷ
2011-12 – 1 ಕೋಟಿ
2016-17 – 1.5 ಕೋಟಿ
2019-20 – 2 ಕೋಟಿ

ಭಾರತದಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದ ಮಾರುತಿ ಸುಜುಕಿ

ಕಳೆದ ಹಲವಾರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿ ನಂಬರ್ ಒನ್ ಸ್ಥಾನದಲ್ಲಿದೆ. ಕಂಪನಿಯ 8 ಕಾರುಗಳು ಬಿಎಸ್6 ಎಂಜಿನ್ ಕಾರುಗಳಾಗಿದ್ದು ಈಗಾಗಲೇ ರಸ್ತೆಗೆ ಇಳಿದಿದೆ. ಸುಜುಕಿ ಜೊತೆಗೂಡಿ ಮಾರುತಿ ಈಗ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ತೊಡಗಿದ್ದು 50 ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಈಗ ದೇಶದ ಹಲವು ಭಾಗಗಳಲ್ಲಿ ಪರೀಕ್ಷೆ ನಡೆಸುತ್ತಿದೆ.

Related Articles

Leave a Reply

Your email address will not be published. Required fields are marked *