ನವದೆಹಲಿ: ಮಾರುತಿ ಕಂಪನಿಯ ಡಿಸೈರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹಗ್ಗೆಳಿಕೆಗೆ ಪಾತ್ರವಾಗಿದೆ. ಏಪ್ರಿಲ್‍ನಿಂದ ಆರಂಭಗೊಂಡ ಈ ಹಣಕಾಸು ವರ್ಷದಲ್ಲಿ 1.2 ಲಕ್ಷ ಡಿಸೈರ್ ಕಾರು ಮಾರಾಟಗೊಂಡಿದೆ.
ಕಳೆದ 15 ವರ್ಷಗಳಿಂದಲೂ ಮಾರುತಿ ಕಂಪನಿಯ ಅಲ್ಟೋ ಕಾರು ಅತಿ ಹೆಚ್ಚು ಮಾರಾಟವಾಗುವ ಮೂಲಕ ದೇಶದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿಕೊಂಡು ಬಂದಿತ್ತು. ಆದರೆ ಈ ಬಾರಿ ಈ ಪಟ್ಟ ಡಿಸೈರ್‌ಗೆ ಸಿಕ್ಕಿದೆ. ಏಪ್ರಿಲ್‍ನಿಂದ ಆರಂಭಗೊಂಡು ನವೆಂಬರ್ ಅವಧಿಯವರೆಗೆ ಒಟ್ಟು 1,28,695 ಡಿಸೈರ್ ಕಾರುಗಳು ಮಾರಾಟಗೊಂಡಿದೆ.
Advertisement
Advertisement
Advertisement
ಸೈಜ್ ಮತ್ತು ಸ್ಟೇಟಸ್ ವಿಚಾರದಲ್ಲಿ ಈ ಕಾರು ಜನರ ಮನ ಗೆದ್ದಿದೆ. ಈ ಹಿಂದೆ ಹ್ಯಾಚ್‍ಬ್ಯಾಕ್ ಕಾರುಗಳು ಹೆಚ್ಚು ಮಾರಾಟವಾಗುತಿತ್ತು. ಈಗ ಜನರ ಚಿಂತನೆ ಬದಲಾಗಿದ್ದು ಸುರಕ್ಷತೆಯತ್ತ ಗಮನ ನೀಡುತ್ತಾರೆ. ಇದರ ಪರಿಣಾಮ ಸೆಡಾನ್ ಕಾರುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
Advertisement
ಈ ಅವಧಿಯಲ್ಲಿ ಹೋಂಡಾ ಅಮೇಝ್ 40,676 ಕಾರುಗಳು ಮಾರಾಟಗೊಂಡಿದ್ದರೆ, ಹುಂಡೈ ಕಂಪನಿ ಎಕ್ಸೆಂಟ್ 12,239 ಕಾರುಗಳು ಮಾರಾಟಗೊಂಡಿದೆ. ಫೋರ್ಡ್ ಕಂಪನಿಯ ಆಸ್ಪೈರ್ 6,765 ಕಾರುಗಳು ಮಾರಾಟಗೊಂಡಿದೆ.
2017ಕ್ಕೆ ಮೂರನೇ ತಲೆಮಾರಿನ ಡಿಸೈರ್ ಕಾರನ್ನು ಬಿಡುಗಡೆ ಮಾಡಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್, 1.3ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಡಿಸೈರ್ ಕಾರು ಲಭ್ಯವಿದೆ. 2,450 ಮಿ.ಮೀ ವೀಲ್ ಬೇಸ್, 3,995 ಮಿ.ಮೀ ಉದ್ದ, 1,735 ಮಿ.ಮೀ ಅಗಲ, 1,515 ಮಿ.ಮೀ ಎತ್ತರವನ್ನು ಹೊಂದಿದೆ.
2008 ರಲ್ಲಿ ಮೊದಲ ತಲೆಮಾರಿನ ಸ್ವಿಫ್ಟ್ ಡಿಸೈರ್ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೇವಲ 19 ತಿಂಗಳಿನಲ್ಲಿ 1 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಬರೆದಿತ್ತು.