ಮರುಡೇಶ್ವರದಲ್ಲಿ ವಿದ್ಯಾರ್ಥಿನಿಯರ ಸಾವು ಕೇಸ್: ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ

Public TV
1 Min Read
Murudeshwar death

– ಸಂತ್ರಸ್ತ ಕುಟುಂಬಸ್ಥರಿಗಿಂದು ಮೃತದೇಹ ಹಸ್ತಾಂತರ

ಕಾರವಾರ: ಮುರುಡೇಶ್ವರದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಲಾರದಿಂದ (Kolar) ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲಾದ ಬಳಿಕ ಉತ್ತರ ಕನ್ನಡ (Uttara Kannada) ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಒಂದೆಡೆ ಮುರುಡೇಶ್ವರ ಕಡಲ ತೀರದಲ್ಲಿ ನಿರ್ಬಂಧ ಹೇರಲಾಗಿದ್ದು, ಇನ್ನೊಂದೆಡೆ ಮುಖ್ಯ ಶಿಕ್ಷಕಿ ಸೇರಿ ಒಟ್ಟು 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕ್ಷಕರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ನಾಲ್ಕು ವಿದ್ಯಾರ್ಥಿನಿಯರ ಸಾವಿಗೆ ಕಾರಣ, ನಿರ್ಲಕ್ಷ್ಯ ಕುರಿತು ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ವೈದ್ಯನ ಕೈಹಿಡಿದ್ರೂ ಸುಖವಿಲ್ಲದ ಬದುಕು, 4 ವರ್ಷದಿಂದ ಗೃಹಬಂಧನದಲ್ಲಿ ಗೃಹಿಣಿ!

ಈ ಮಧ್ಯೆ ಪ್ರವಾಸಿಗರಿಗೆ ಜಿಲ್ಲಾಡಳಿತ ಕಡಲ ತೀರಕ್ಕೆ ನಿರ್ಬಂಧ ಹೇರಿದೆ. ಇದೀಗ ಮುರುಡೇಶ್ವರ ಬಿಟ್ಟಿರುವ ಪಾರ್ಥಿವ ಶರೀರಗಳು ಇಂದು (ಡಿ.12) ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಲಿದೆ. ಬಳಿಕ ಜಿಲ್ಲಾಡಳಿತದ ವತಿಯಿಂದ ಅಂತಿಮ ನಮನ ಸಲ್ಲಿಸಿ, ನಂತರ ಅವರವರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುತ್ತದೆ.

ಘಟನೆ ಏನು?
ಕೋಲಾರದ ಮುಳಬಾಗಿಲು ತಾಲೂಕಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಮುರುಡೇಶ್ವರ ಕಡಲ ತೀರದಲ್ಲಿ ಆಟ ಆಡುವಾಗ ಶಾಲೆಯ 7 ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು. 7 ವಿದ್ಯಾರ್ಥಿನಿಯರ ಪೈಕಿ 4 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು.ಇದನ್ನೂ ಓದಿ: ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ – ಟೆಕ್ಕಿ ಅತುಲ್ ಆತ್ಮಹತ್ಯೆ ಕುರಿತು ಕಂಗನಾ ಪ್ರತಿಕ್ರಿಯೆ

Share This Article