ಚೆನ್ನೈ: ಭಾರತೀಯ ಸೇನೆಯ ಹುತಾತ್ಮ ಯೋಧ ನಾಯಕ್ ದೀಪಕ್ ಕುಮಾರ್ ಅವರ ಪತ್ನಿ ಜ್ಯೋತಿ ದೀಪಕ್ ನೈನ್ವಲ್ ಈಗ ಸೇನಾಧಿಕಾರಿಯಾಗಿದ್ದಾರೆ.
Advertisement
2018ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಜ್ಯೋತಿ ಅವರ ಪತಿ ದೀಪಕ್ ಕುಮಾರ್ ಹುತಾತ್ಮರಾಗಿದ್ದಾರೆ. ಪರಿಣಾಮವಾಗಿ 9 ವರ್ಷದ ಮಗಳು, 7 ವರ್ಷದ ಮಗನ ಪೋಷಣೆ ಜವಾಬ್ದಾರಿ ಜ್ಯೋತಿ ಅವರ ಹೆಗಲಿಗೆ ಬೀಳುತ್ತದೆ. ಕುಟುಂಬ ಸಂಕಷ್ಟದಲ್ಲಿದ್ದ ವೇಳೆ ಜ್ಯೋತಿ ಅವರ ತಾಯಿ ಮಗಳಿಗೆ ಧೈರ್ಯ ತುಂಬುತ್ತಾರೆ. ಇದನ್ನೂ ಓದಿ: ಖರ್ಗೆ ಬಳಿ ಪ್ರತಾಪ್ ಸಿಂಹ ಕ್ಷಮೆ ಕೇಳದಿದ್ರೆ ಚಪ್ಪಲಿಯಲ್ಲಿ ಹೊಡೀತೇವೆ: ಮಹಾಂತ ಶಿವಾಚಾರ್ಯ
Advertisement
ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂದು ಜ್ಯೋತಿ ಅವರ ತಾಯಿ ಹುರಿದುಂಬಿಸುತ್ತಾರೆ. ತಾಯಿಯ ಪ್ರೇರಣೆಯಿಂದ ಸೇನೆಗೆ ಸೇರಬೇಕೆಂಬ ಹಂಬಲ ಜ್ಯೋತಿ ಅವರಲ್ಲಿ ಮೂಡುತ್ತದೆ. ಇದನ್ನೂ ಓದಿ: ರಾಜಕೀಯ ನಾಯಕರಿಗೆ ಕೈ ಮುಗಿದ ಜೂನಿಯರ್ ಎನ್‍ಟಿಆರ್
Advertisement
Advertisement
ಬ್ರಿಗೇಡಿಯರ್ ಚೀಮಾ ಮತ್ತು ಕರ್ನಲ್ ಎಂ.ಪಿ.ಸಿಂಗ್ ಅವರ ಮಾರ್ಗದರ್ಶನದಿಂದ ಸರ್ವೀಸ್ ಸೆಲಕ್ಷನ್ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಅದರಲ್ಲಿ ಪಾಸಾಗಿ ನಂತರ ಚೆನ್ನೈನ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸುವ ಮೂಲಕ ಸೇನಾಧಿಕಾರಿಯಾಗಿದ್ದಾರೆ.