ಮಂಡ್ಯ: ಇಂದು ಹುತಾತ್ಮ ಯೋಧ ಗುರು ಅವರ ಹನ್ನೊಂದನೆ ದಿನದ ತಿಥಿ ಕಾರ್ಯವಿದ್ದು, ಗುರು ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಕಾರ್ಯ ನಡೆಯುತ್ತಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಗುರು ಅವರ ತಿಥಿ ಕಾರ್ಯಕ್ಕೆ ಸಾವಿರಾರು ಜನರು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಜೆಸಿಬಿ, ಬುಲ್ಡೋಜರ್‍ನಿಂದ ಜಾಗ ಸಮತಟ್ಟು ಮಾಡಿಸಿ ವ್ಯವಸ್ಥೆ ಮಾಡಲಾಗಿದೆ. ಗುರು ಅವರ ತಿಥಿ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಹೊತ್ತಿದ್ದಾರೆ.
ಹುತಾತ್ಮ ಯೋಧ ಗುರು ಅವರ ಸಮಾಧಿ ಸ್ಥಳದಲ್ಲಿ ಶಾಮಿಯಾನ ಹಾಕಲಾಗಿದೆ. ಒಂದು ಬಾರಿಗೆ ಒಂದೂವರೆ ಸಾವಿರ ಜನ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹುತಾತ್ಮ ಗುರುವಿನ ಸಮಾಧಿ ಪಕ್ಕದಲ್ಲೆ ಪುಟ್ಟದಾದ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯಲ್ಲಿ ಮಳವಳ್ಳಿ ಮಹಾದೇವ ಸ್ವಾಮಿ ಅವರ ತಂಡದಿಂದ ಭಜನೆಯನ್ನು ಮಾಡಲಾಗುತ್ತದೆ.
ಹುತಾತ್ಮ ಗುರು ಅವರ ಸಮಾಧಿಯನ್ನ ಅಭಿಮಾನಿಗಳು ಹೂಗಳಿಂದ ಅಲಂಕಾರ ಮಾಡಿದ್ದು, ಸಮಾಧಿ ಸ್ಥಳದಲ್ಲಿ 4/4 ಅಡಿ ಅಳತೆಯ ಭಾವಚಿತ್ರ ಇಡಲೂ ವ್ಯವಸ್ಥೆ ಮಾಡಲಾಗಿದೆ. ಅನ್ನ ಸಾಂಬಾರ್, ಸಿಹಿ ಬೂಂದಿ, ಪಾಯಸ, ಮಸಾಲೆ ವಡೆ, ಜಾಂಗೀರು, ಅವರೇಕಾಳಿನ ಕೂಟು, ಮೊಸರು, ಹಪ್ಪಳ ಉಪ್ಪಿನ ಕಾಯಿ, ತಿಥಿ ಊಟಕ್ಕೆ ಅಡುಗೆ ತಯಾರಿ ಮಾಡಲಾಗಿದೆ.
ತಿಥಿ ಕಾರ್ಯದ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯ ಸಂಪೂರ್ಣವಾಗಿ ಡಿ.ಸಿ.ತಮ್ಮಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv