ಚಂಡೀಗಢ: ಮೊಮ್ಮಗಳನ್ನು ಸೇನೆಗೆ ಸೇರಿಸುತ್ತೇನೆ. ಈ ಮೂಲಕ ನನ್ನ ಮಗನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಲೂತ್ತೇವೆ ಎಂದು ಹುತಾತ್ಮ ಯೋಧ ಮೇಜರ್ ಆಶೀಶ್ ಢೋನ್‍ಚಕ್ (Major Aashish Dhonchak) ತಾಯಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ (jammu Kashmir) ಅನಂತ್‍ನಾಗ್‍ನಲ್ಲಿ ಸೇನೆ ಹಾಗೂ ಉಗ್ರರ ಜೊತೆ ನಡೆದ ಗುಮಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಅಂತೆಯೇ ಇಂದು ಈ ಯೋಧರ ಅಂತ್ಯಕ್ರಿಯೆಯು ತಾಯ್ನಾಡಿನಲ್ಲಿ ನಡೆದಿದೆ.
Advertisement
Advertisement
ಪಾಣಿಪತ್‍ನ (Panipat) ಬಿಂಜೋಲ್‍ನಲ್ಲಿ ವೀರಯೋಧ ಮೇಜರ್ ಆಶೀಶ್ ಢೋನ್‍ಚಕ್ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಅಭಿಮಾನಿಗಳು, ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರು ಪಾಣಿಪತ್‍ನಲ್ಲಿ ಹೊಸದಾಗಿ ನಿರ್ಮಿಸಿದ ಅವರ ಮನೆಯಿಂದ ಅವರ ತವರು ಬಿಂಜೋಲ್‍ಗೆ ನಡೆದುಕೊಂಡು ಹೋದರು. ಇನ್ನು ಯೋಧನ ಮೃತದೇಹವಿದ್ದ ಕಾರಿನ ಜೊತೆ ಕಾರಿನಲ್ಲಿ ತೆರಳಿದರು. ಇದನ್ನೂ ಓದಿ: ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು
Advertisement
ಭಾರತ ಮಾತೆಗಾಗಿ ನನ್ನ ಮಗ ಪ್ರಾಣತ್ಯಾಗ ಮಾಡಿದ್ದಾನೆ. ನನ್ನ ಮಗನ ಬಗ್ಗೆ ನನಗೆ ಹೆಮ್ಮಾಯಾಗುತ್ತಿದೆ ಎಮದು ಹೇಳಿದ್ದಾರೆ. ಜೊತೆಗೆ ಮಗನಿಗೆ ಎರಡೂವರೆ ವರ್ಷದ ಮಗಳಿದ್ದಾಳೆ. ಆಕೆ ದೊಡ್ಡವಳಾದ ಬಳಿಕ ಸೇನೆಗೆ ಸೇರಿಸುತ್ತೇನೆ. ನನ್ನ ಮೊಮ್ಮಗಳನ್ನು ಯೋಧಳನ್ನಾಗಿ ಮಾಡುತ್ತೇನೆ. ಈ ಮೂಲಕ ಮಗನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
Advertisement
ಆಶೀಶ್ ಹೊಸದಾಗಿ ಮೂರು ಅಂತಸ್ತಿನ ಮನೆಯೊಂದು ಕಟ್ಟಿಸುತ್ತಿದ್ದು, ಇದರ ಗೃಹಪ್ರವೇಶಕ್ಕಾಗಿ ಮುಂದಿನ ತಿಂಗಳು ಅಂದರೆ ಅಕ್ಟೋಬರ್‍ನಲ್ಲಿ ತಾಯ್ನಾಡಿಗೆ ಆಗಮಿಸುವವರಿದ್ದರು. ಅಲ್ಲದೆ ಅಕ್ಟೋಬರ್ 23 ಆಶೀಶ್ ಹುಟ್ಟುಹಬ್ಬ ಕೂಡ ಆಗಿತ್ತು. ಹೀಗಾಗಿ ಅದೇ ದಿನ ಗೃಹಪ್ರವೇಶ ಕಾರ್ಯಕ್ರಮವನ್ನು ಕೂಡ ಇಟ್ಟುಕೊಂಡಿದ್ದರು. ಆದರೆ ಈ ಮಧ್ಯೆಯೇ ಆಶೀಶ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
Web Stories