ಬೆಂಗಳೂರು: ಹುತಾತ್ಮ ಯೋಧ ಗುರು ಕುಟುಂಬದ ಒತ್ತಾಯಕ್ಕೆ ಮಣಿದ ಸರ್ಕಾರ ವಿಶೇಷ ವಿಮಾನದ ಮೂಲಕ ಗುರು ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ತಲುಪಲಿದೆ.
ತಿರುಚ್ಚಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬೆಳಗ್ಗೆ ಸುಮಾರು 11.45ಕ್ಕೆ ಎಚ್‍ಎಲ್‍ಎ ವಿಮಾನ ನಿಲ್ದಾಣಕ್ಕೆ ಬರುವ ಸಾಧ್ಯತೆ ಇದೆ. ಮೊದಲು ದೆಹಲಿಯಿಂದ ತಿರುಚ್ಚಿ, ಮಧುರೈ, ಕ್ಯಾಲಿಕಟ್‍ಗೆ ತೆರಳಿ ಬೆಂಗಳೂರಿಗೆ ಬರಬೇಕಿತ್ತು. ಆದರೆ ಕುಟುಂಬಸ್ಥರ ಒತ್ತಾಯಕ್ಕೆ ವಿಶೇಷ ವಿಮಾನದ ಮೂಲಕ ತಿರುಚ್ಚಿಯಿಂದ ಬೆಂಗಳೂರಿಗೆ ಪಾರ್ಥಿವ ಶರೀರ ತಲುಪುತ್ತದೆ ಎಂದು ಮಂಡ್ಯ ಜಿಲ್ಲಾಡಳಿತದಿಂದ ಮಾಹಿತಿ ತಿಳಿದು ಬಂದಿದೆ.
Advertisement
Advertisement
ಮಾರ್ಗ: ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಗುರು ಯೋಧ ಪಾರ್ಥಿವ ಶರೀರ ಬಂದು ಅಲ್ಲಿಂದ ಎಡಕ್ಕೆ ತಿರುವು ಓಲ್ಡ್ ಏರ್‌ಪೋರ್ಟ್ ರಸ್ತೆ ಮೂಲಕ ಮಣಿಪಾಲ್ ಸೆಂಟರ್, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ಕಬ್ಬನ್ ರಸ್ತೆ ಮೂಲಕ ಹಡ್ಸನ್ ಸರ್ಕಲ್ ಎಂಟ್ರಿಯಾಗುತ್ತದೆ. ಅಲ್ಲಿಂದ ಟೌನ್ ಹಾಲ್ ಬಳಿ ಬಲಕ್ಕೆ ತಿರುಗಿ ಬಾಲಗಂಗಾಧರ ಸ್ವಾಮಿ ಫ್ಲೈ ಓವರ್ ಮೇಲೆ ಹತ್ತಿ, ದೀಪಾಂಜಲಿನಗರ, ಆರ್.ಆರ್.ನಗರ, ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು (ಶಿವಪುರ) ಬಳಿ ಎಡಕ್ಕೆ ತಿರುಗಿ ಕೆ.ಎಂ ದೊಡ್ಡಿಗೆ ತಲುಪಲಿದೆ.
Advertisement
ಯೋಧನ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯರ ಆಗಮನ ಹಿನ್ನೆಲೆಯಲ್ಲಿ ಮದ್ದೂರಿನ ಸಮೀಪ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಮದ್ದೂರಿನ ಹುಲಿಗೆರೆಪುರ ಗ್ರಾಮದ ಬಳಿಯಿರುವ ಹೆಲಿಪ್ಯಾಡ್‍ಗೆ ನೀರು ಸಿಂಪಡಿಸಿ ಜಿಲ್ಲಾಡಳಿತ ಸಜ್ಜುಗೊಳಿಸುತ್ತಿದೆ.
Advertisement
ಝೀರೋ ಟ್ರಾಫಿಕ್:
ವಿಐಪಿ ರಸ್ತೆ ಮುಖಾಂತರ ಗುರು ಪಾರ್ಥಿವ ಶರೀರ ರವಾನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಹೆಚ್‍ಎಎಲ್ ಏರ್‌ಪೋರ್ಟ್ ನಿಂದ ಎಂಜಿ ರಸ್ತೆ ಮೂಲಕ ಮೂವ್ ಆಗುತ್ತದೆ. ಹೆಚ್‍ಎಎಲ್ ಮೂಲಕ ದೊಮ್ಮಲೂರು – ಟ್ರಿನಿಟಿ ಜಂಕ್ಷನ್ – ಎಂಜಿ ರಸ್ತೆ – ಟೌನ್ ಹಾಲ್ – ಮೈಸೂರು ರಸ್ತೆ, ನಾಯಂಡಹಳ್ಳಿ ಪ್ಲೇಓರ್ ಮೂಲಕ ಕೆಂಗೇರಿ, ಬಿಡಿದಿ, ರಾಮನಗರ, ಮಂಡ್ಯ, ಝೀರೋ ಟ್ರಾಫಿಕ್ ಮೂಲಕ ಪಾರ್ಥಿವ ರವಾನೆಗೆ ಸಿದ್ಧತೆ ಮಾಡಿಕೊಂಡಿಕೊಳ್ಳಲಾಗಿದೆ ಎಂದು ಟ್ರಾಫಿಕ್ ಈಸ್ಟ್ ಡಿಸಿಪಿ ಹೇಳಿದ್ದಾರೆ.
ನಗರದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಇನ್ನೂ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆಗಮಿಸಿದ್ದಾರೆ. ಇತ್ತ ಹೆಚ್‍ಎಎಲ್ ಪೊಲೀಸರು ವಿಮಾನ ನಿಲ್ದಾಣದ ಸುತ್ತ ಬಂದೋಬಸ್ತ್ ಮಾಡಿದ್ದು, ಈಗಾಗಲೇ ಯಲಹಂಕದ ಏರ್ ಬೇಸ್ ನಲ್ಲಿ ಸೇನಾ ವಾಹನ ಸಿದ್ಧವಾಗಿದ್ದು, ಎಚ್‍ಎಎಲ್ ಗೆ ಆಗಮಿಸುತ್ತಿದೆ.
https://www.youtube.com/watch?v=SZDaoFTiQg4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv